ಕೋವಿಡ್ ಹೊಸ ಮಾರ್ಗ ಸೂಚಿ: ನಾಳೆಯಿಂದ ಶಾಲೆ ಮತ್ತೆ ಮುಚ್ಚಲಿದೆಯೇ?

ಕೋವಿಡ್ ಹೊಸ ಮಾರ್ಗ ಸೂಚಿ: ನಾಳೆಯಿಂದ ಶಾಲೆ ಮತ್ತೆ ಮುಚ್ಚಲಿದೆಯೇ?
republicday728
republicday468
republicday234

ಬೆಂಗಳೂರು: ಕೋವಿಡ್ ಎರಡನೇ ಅಲೆ ದಿನೇ ದಿನೇ ಹೆಚ್ಚುತ್ತಿದ್ದು ಕರ್ನಾಟಕ ರಾಜ್ಯ ಸರಕಾರ ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದರ ಪ್ರಕಾರ ಆರರಿಂದ ಒಂಬತ್ತನೇ ತರಗತಿ ವರೆಗಿನ ಎಲ್ಲಾ ಶಾಲಾ ತರಗತಿಗಳನ್ನು ಮತ್ತೆ ಮುಚ್ಚಲು ತೀರ್ಮಾನಿಸಲಾಗಿದೆ.
     ಇದರ ಜೊತೆಗೆ  ವಿದ್ಯಾಗಮಕ್ಕೂ ಬ್ರೇಕ್ ಬೀಳಲಿದೆ. ಅಲ್ಲದೆ ರಾಜ್ಯಾದಾದ್ಯಂತ ಯಾವುದೇ ರೀತಿಯ ರಾಲಿ, ಮುಷ್ಕರ, ಧರಣಿಗಳನ್ನೂ ನಡೆಸದಂತೆ ನಿಷೇಧ ವಿಧಿಸಲಾಗಿದೆ.
     ಹೊಸ ಮಾರ್ಗಸೂಚಿಯ ಪ್ರಕಾರ ಕಚೇರಿ ಕೆಲಸಗಳನ್ನು ಆದಷ್ಟು ಮನೆಯಲ್ಲೇ ನಿರ್ವಹಿಸುವಂತೆ ಕೋರಲಾಗಿದೆ. ಧಾರ್ಮಿಕ ಆಚರಣೆ, ಮೇಳಗಳಿಗೆ ತಡೆ ಹೇರಲಾಗಿದೆ.  ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕಾಗಿದೆ. ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರಿಗೆ ಮಿತಿ ಹೇರಲಾಗಿದೆ. ಈ ಮಾರ್ಗಸೂಚಿಯು ಎಪ್ರಿಲ್ 20 ರ ವರೆಗೆ ಅನ್ವಯಿಸಲಿದೆ ಎಂದು ತಿಳಿಸಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ