ಕೊರೋನ ನಡುವೆ ಸ್ವಾತಂತ್ರ್ಯ ದಿನಾಚರಣೆ: ಕೆಂಪು ಕೋಟೆಯಲ್ಲಿ 6 ಅಡಿ ಅಂತರದಲ್ಲಿ ಆಸನ, ವಿಶೇಷ ನಿಯಮ ಜಾರಿ

ಕೊರೋನ ನಡುವೆ ಸ್ವಾತಂತ್ರ್ಯ ದಿನಾಚರಣೆ: ಕೆಂಪು ಕೋಟೆಯಲ್ಲಿ 6 ಅಡಿ ಅಂತರದಲ್ಲಿ ಆಸನ, ವಿಶೇಷ ನಿಯಮ ಜಾರಿ

ಕೊರೋನ ನಡುವೆ ಸ್ವಾತಂತ್ರ್ಯ ದಿನಾಚರಣೆ: ಕೆಂಪು ಕೋಟೆಯಲ್ಲಿ 6 ಅಡಿ ಅಂತರದಲ್ಲಿ ಆಸನ, ವಿಶೇಷ ನಿಯಮ ಜಾರಿ
To take a trivial example, which of us ever undertakes laborious physical exercise

ಹೊಸದಿಲ್ಲಿ, ಆ.14: ಕೊರೋನ ಪಿಡುಗಿನ ಹಿನ್ನೆಲೆಯಲ್ಲಿ ಸರಕಾರ ಕೆಂಪು ಕೋಟೆಯಲ್ಲಿ ಮುನ್ನೆಚ್ಚರಿಕೆಯೊಂದಿಗೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿದೆ.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಬಹುಪದರದ ಭದ್ರತಾ ವ್ಯವಸ್ಥೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳಲಿದೆ. ಆಸನಗಳ ನಡುವೆ 6 ಅಡಿಗಳ ಅಂತರ ಹಾಗೂ ಮಾಸ್ಕ್ ಧರಿಸುವುದು ಇದರಲ್ಲಿ ಒಳಗೊಳ್ಳಲಿದೆ. ಕೊರೋನ ಪಿಡುಗಿನ ಹಿನ್ನೆಲೆಯಲ್ಲಿ ಯಾವುದೇ ಜನ ನಿಬಿಡತೆ ಉಂಟಾಗದಂತೆ ಆಸನಗಳ ಆವರಣ ಹಾಗೂ ಕಾಲು ದಾರಿಗೆ ಮರದ ನೆಲಹಾಸು ಹಾಗೂ ಕಾರ್ಪೆಟ್‌ಗಳನ್ನು ಹಾಕಲಾಗಿದೆ. ಹೆಚ್ಚಿನ ಪಾರ್ಕಿಂಗ್ ಪ್ರದೇಶಗಳಲ್ಲಿ ಇಟ್ಟಿಗೆಗಳನ್ನು ಇರಿಸಲಾಗಿದೆ. ಅಲ್ಲದೆ, ವಾಹನಗಳಿಗೆ ಸುಲಭವಾಗಿ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ. ಗೌರವ ರಕ್ಷೆ ಸ್ವೀಕರಿಸುವ ಸದಸ್ಯರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆಹ್ವಾನ ಇರುವವರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ