ಕಾಸರಗೋಡು: ಆಟವಾಡಲೆಂದು ಮನೆಯಿಂದ ತೆರಳಿದ್ದ ವಿದ್ಯಾರ್ಥಿ ಶಾಲೆ ಸಮೀಪ ಶವವಾಗಿ ಪತ್ತೆ

ಕಾಸರಗೋಡು: ಆಟವಾಡಲೆಂದು ಮನೆಯಿಂದ ತೆರಳಿದ್ದ ವಿದ್ಯಾರ್ಥಿ ಶಾಲೆ ಸಮೀಪ ಶವವಾಗಿ ಪತ್ತೆ

ಕಾಸರಗೋಡು: ಆಟವಾಡಲು ಮನೆಯಿಂದ ಹೊರಗೆ ಹೋಗಿದ್ದ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯೋರ್ವ ಶಾಲೆಯ ಸಮೀಪ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. 

      ಕುಂಡಂಗುಳಿ ನಿವಾಸಿ ವಿನೋದ್ - ಶಾಲಿನಿ ದಂಪತಿಗಳ ಪುತ್ರ ಅಭಿನವ್ (17) ನಿಗೂಢವಾಗಿ ಸಾವನ್ನಪ್ಪಿದ ಪ್ಲಸ್ ವನ್ ಹೈಯರ್ ಸೆಕೆಂಡರಿ ವಿದ್ಯಾರ್ಥಿಯಾಗಿದ್ದಾನೆ. 

      ಮಾರ್ಚ್ 7 ರಂದು ಅಭಿನವ್ ತರಗತಿ ಮುಗಿಸಿ ಸಂಜೆ ಮನೆಗೆ ಬಂದು ಆಟವಾಡಲು ಹೋಗುವುದಾಗಿ ಹೇಳಿದ್ದ. ಸಂಜೆಯಾದರೂ ವಾಪಸ್‌ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ರಾತ್ರಿ 8 ಗಂಟೆ ಸುಮಾರಿಗೆ ಮನೆ ಸಮೀಪದ ಎಲ್‌ಪಿ ಶಾಲೆಯ ಹಿಂದೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ರಕ್ಷಿಸಲು ಸಾಧ್ಯವಾಗಿಲ್ಲ. 

     ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ