ಕೃಷಿ ಕಾಯ್ದೆಗಳ ರದ್ಧತಿ ರೈತರ ವಿಜಯ: ಕಾನೂನುಗಳು ಮಾತ್ರವಲ್ಲದೆ ನೀತಿಗಳೂ ಬದಲಾಗಬೇಕು - ಅಖಿಲ ಭಾರತ ಕಿಸಾನ್ ಸಭಾ

ಕೃಷಿ ಕಾಯ್ದೆಗಳ ರದ್ಧತಿ ರೈತರ ವಿಜಯ: ಕಾನೂನುಗಳು ಮಾತ್ರವಲ್ಲದೆ ನೀತಿಗಳೂ ಬದಲಾಗಬೇಕು - ಅಖಿಲ ಭಾರತ ಕಿಸಾನ್ ಸಭಾ

ನವದೆಹಲಿ ನ.19: ಕೃಷಿ ಕಾನೂನುಗಳು ಮಾತ್ರವಲ್ಲ ರೈತರೊಂದಿಗಿನ ನೀತಿಗಳಲ್ಲಿಯೂ ಬದವಣೆ ಬರಬೇಕು ಎಂದು ಅಖಿಲ ಭಾರತ ಕಿಸಾನ್‌ ಸಭಾ ಆಗ್ರಹಿಸಿದೆ. ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯುತ್ತಿರುವುದು ಕೃಷಿಕರ ವಿಜಯ ಎಂದು ಕಿಸಾನ್‌ ಸಭಾ ಅಭಿಪ್ರಾಯ ಪಟ್ಟಿದೆ.

      ಇಂದು ಬೆಳಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸ್ವತಃ ಪ್ರಧಾನಿಯೇ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು. ಈ ತಿಂಗಳ ಅಂತ್ಯದೊಳಗೆ ಕಾನೂನನ್ನು ರದ್ದುಗೊಳಿಸಲಾಗುವುದು. ಇದರೊಂದಿಗೆ ಕಾನೂನನ್ನು ವಿರೋಧಿಸಿ ರೈತರು ಆರಂಭಿಸಿದ್ದ ಸುದೀರ್ಘ ಹೋರಾಟ ಅಂತ್ಯ ಕಾಣಲಿದೆ.

      ಉತ್ತರ ಪ್ರದೇಶ ಮತ್ತು ಪಂಜಾಬ್‌ನಲ್ಲಿ ಚುನಾವಣೆಗೆ ಕೆಲವು ದಿನಗಳಷ್ಟೇ ಬಾಕಿ ಉಳಿದಿವೆ. ಕೃಷಿಕರ ಧೃಡ ನಿರ್ಧಾರವು ಈ ಭಾಗದಲ್ಲಿ ಪಕ್ಷದ ವರ್ಚಸ್ಸಿಗೆ ಇನ್ನಷ್ಟು ಧಕ್ಕೆಯಾಗಲಿದೆ ಎಂಬ ಕಾರಣವೂ ಕೃಷಿ ಕಾನೂನುಗಳನ್ನು ಹಿಂಪಡೆಯುವುದರಲ್ಲಿದೆ ಎಂದು ವಿಮರ್ಶಿಸಲಾಗಿದೆ.


ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ