ಕೋವಿನ್‌ ಆ್ಯಪ್: ನಕಲಿಗಳಿದ್ದಾರೆ ಎಚ್ಚರಿಕೆ!

ಕೋವಿನ್‌ ಆ್ಯಪ್: ನಕಲಿಗಳಿದ್ದಾರೆ ಎಚ್ಚರಿಕೆ!

ನವದೆಹಲಿ: ಕೋವಿಡ್ ಲಸಿಕೆಗಳು, ಅದರ ಆ್ಯಪ್ ಗಳೂ ಮಾರುಕಟ್ಟೆಗೆ ಬರುವ ಮೊದಲೇ ನಕಲಿಗಳು ರಂಗ ಪ್ರವೇಶ ಮಾಡಿದ್ದಾರೆ‌. ದೇಶದಾದ್ಯಂತ ಕೋವಿಡ್ ಲಸಿಕೆ ನೀಡಿಕೆಗೆ ಸಿದ್ಧತೆ ನಡೆದಿದ್ದು, ಆ್ಯಪ್‌ ಮೂಲಕ ನೋಂದಣಿ ಮಾಡುವ ವಿಚಾರದಲ್ಲಿಯೂ ಸರ್ಕಾರ ಕಾರ್ಯಪ್ರವೃತ್ತವಾಗಿದೆ.
     ಈ ಮಧ್ಯೆ, ನಕಲಿಗಳು ಮಧ್ಯೆ ಪ್ರವೇಶ ಮಾಡಿ ಕೋವಿಡ್ ಲಸಿಕೆ ಅ್ಯಪ್ ಹೆಸರಿನಲ್ಲಿ ನಕಲಿ ಅ್ಯಪ್‌ ಗಳನ್ನು ಬಿಟ್ಟು ಜನರ ದಾರಿತಪ್ಪಿಸಲು ಆರಂಭಿಸಿದ್ದಾರೆ. ಕೋವಿನ್ ಅ್ಯಪ್ ಅನ್ನು ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಅ್ಯಪ್ ಬಿಡುಗಡೆ ಶೀಘ್ರ: ಕೋವಿನ್ ಅಧಿಕೃತ ಅ್ಯಪ್ ಅನ್ನು ಸರ್ಕಾರ ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ. ಕೋವಿನ್ ಅ್ಯಪ್, ಲಸಿಕೆ ಕುರಿತ ಮಾಹಿತಿ, ನೋಂದಣಿ ಮತ್ತು ಟ್ರ್ಯಾಕಿಂಗ್ ಸಹಿತ ವಿವಿಧ ಪ್ರಯೋಜನ ಒದಗಿಸಲಿದೆ. ಆದರೆ ನಕಲಿ ಅ್ಯಪ್ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಚಿವಾಲಯ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ