ಕೋವಿಡ್ ಹೆಚ್ಚಳ: ಹಬ್ಬಗಳ ಆಚರಣೆಗೆ ಸರಕಾರದ ಮಾರ್ಗಸೂಚಿ

ಕೋವಿಡ್  ಹೆಚ್ಚಳ: ಹಬ್ಬಗಳ ಆಚರಣೆಗೆ ಸರಕಾರದ ಮಾರ್ಗಸೂಚಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಕಾರಣ, ಹಬ್ಬಗಳ ಆಚರಣೆಗೆ ರಾಜ್ಯ ಸರಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

      ಮೊಹರ್ರಂ, ಗೌರಿ ಗಣೇಶ ಹಬ್ಬ ಸೇರಿದಂತೆ ಇತರೆ ಹಬ್ಬಗಳನ್ನು ಆಚರಿಸುವಾಗ ಜನದಟ್ಟಣೆ ಮತ್ತು ಒಗ್ಗೂಡುವಿಕೆಗಳನ್ನು ತಡೆಗಟ್ಟಲು ನಿರ್ಬಂಧಗಳನ್ನು ವಿಧಿಸುವಂತೆ ರಾಜ್ಯ ಸರಕಾರ ಸ್ಥಳೀಯಾಡಳಿತಕ್ಕೆ ಆದೇಶಿಸಿದೆ.

      ಜಾತ್ರೆಗಳು, ದೇವಾಲಯದ ಹಬ್ಬಗಳು, ಮೆರವಣಿಗೆ ಮತ್ತು ಸಭೆ-ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ.

ಮೊಹರ್ರಂ ಆಚರಣೆಗೆ ಮಾರ್ಗಸೂಚಿಗಳು:

      ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೊಹರ್ರಂ ಪ್ರಾರ್ಥನಾ ಸಭೆ          ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ.

      ಮೊಹರಂ ಪ್ರಯುಕ್ತ ಯಾವುದೇ ರೀತಿಯ ಮೆರವಣಿಗೆ          ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಭಾಷಣ                        ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.

      ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್‌ ಅನ್ನು ಕಡ್ಡಾಯವಾಗಿ            ಧರಿಸಬೇಕು.

      60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ          ಕೆಳಗಿನವರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು.

      ಮಸೀದಿಯಲ್ಲಿಯೇ ಸಾಮೂಹಿಕ ಪ್ರಾರ್ಥನೆಯನ್ನು              ನಡೆಸತಕ್ಕದ್ದು. ಆ ಸಂದರ್ಭದಲ್ಲಿ ದೈಹಿಕ ಅಂತರ,                ಮಾಸ್ಕ್‌ ಧರಿಸುವಿಕೆ ಕಡ್ಡಾಯವಾಗಿದೆ.

ಗಣೇಶ ಚತುರ್ಥಿ ಹಬ್ಬಕ್ಕೆ ಮಾರ್ಗಸೂಚಿ:

      ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ                    ದೇವಸ್ಥಾನ ಅಥವಾ ಮನೆಗಳಲ್ಲಿಯೇ ಆಚರಿಸತಕ್ಕದ್ದು.

      ಬೇರೆ ಯಾವುದೇ ಸಾರ್ವಜನಿಕ ಸ್ಥಳ,                              ಹೊರಾಂಗಣಗಳಲ್ಲಿ  ಗೌರಿ- ಗಣೇಶ ಮೂರ್ತಿಯನ್ನು            ಪ್ರತಿಸ್ಠಾಪನೆ ಮಾಡುವಂತಿಲ್ಲ.

      ಗಣೇಶ ಮೂರ್ತಿಗಳನ್ನು ತರುವಾಗ ಅಥವಾ                        ವಿಸರ್ಜಿಸುವಾಗ ಯಾವುದೇ ರೀತಿಯ ಮೆರವಣಿಗೆ,              ಮನೋರಂಜನಾ ಕಾರ್ಯಕ್ರಮಗಳನ್ನು                            ಆಯೋಜಿಸುವಂತಿಲ್ಲ.

      ಗಣೇಶ ಚತುರ್ಥಿಯನ್ನು ಆಚರಿಸುವ ದೇವಸ್ಥಾನಗಳನ್ನು        ಪ್ರತಿದಿನ ಸ್ಯಾನಿಟೈಸ್‌ ಮಾಡತಕ್ಕದ್ದು.

      ದರ್ಶನಕ್ಕಾಗಿ ಬರುವ ಭಕ್ತಾದಿಗಳಿಗೆ ಸ್ಯಾನಿಟೈಸರ್‌                ಹಾಗೂ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆಯನ್ನು                      ಕಲ್ಪಿಸತಕ್ಕದ್ದು.

      ದೇವಸ್ಥಾನಕ್ಕೆ ತೆರಳುವ ಭಕ್ತರು ಮಾಸ್ಕ್‌ ತರಿಸುವುದು,            ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ