ಕೋವಿಡ್ ಬಾಧೆಯಿಂದ ಮೃತಪಟ್ಟ ಹಿಂದೂ ಸಹೋದರ: ಅಂತ್ಯಸಂಸ್ಕಾರ ನೆರವೇರಿಸಿದ SKSSF ಮಲಾರ್ ತಂಡ

ಕೋವಿಡ್ ಬಾಧೆಯಿಂದ ಮೃತಪಟ್ಟ ಹಿಂದೂ ಸಹೋದರ:  ಅಂತ್ಯಸಂಸ್ಕಾರ ನೆರವೇರಿಸಿದ SKSSF ಮಲಾರ್ ತಂಡ

ಮಂಗಳೂರು: ಪಾವೂರು ಗ್ರಾಮದ ಕೋವಿಡ್ ಬಾಧಿತ ಹಿಂದೂ ಸಹೋದರನ ಶವ ಸಂಸ್ಕಾರವನ್ನು ಇಲ್ಲಿನ SKSSF ಕಾರ್ಯಕರ್ತರು ನಡೆಸಿಕೊಡುವ ಮೂಲಕ ಕೋಮು ಪೀಡಿತ ಜಿಲ್ಲೆ ಎಂದೇ ಬಿಂಬಿತವಾಗಿದ್ದ ದ.ಕ.ಜಿಲ್ಲೆ ಕೋಮು ಸಾಮರಸ್ಯಕ್ಕೆ ಮತ್ತೆ ಸುದ್ಧಿಯಾಗಿದೆ.

      ಕೋರೋನ ಹಾವಳಿಯು ಕಳೆದೊಂದು ವರ್ಷದಿಂದ ಜಿಲ್ಲೆಯ ಚಿತ್ರಣವನ್ನು ಬದಲಾಯಿಸುತ್ತಿದೆ. ಸದಾ ಕೋಮು ದ್ವೇಷಕ್ಜೆ ಹೆಸರುವಾಸಿಯಾಗಿದ್ದ ದ.ಕ.ಜಿಲ್ಲೆಯು ಕಳೆದೊಂದು ವರ್ಷದಿಂದ ಕೋಮು ಸಾಮರಸ್ಯದ ವಿಣಯದಲ್ಲಿ ಸುದ್ಧಿಯಾಗುತ್ತಿದೆ. ಕೋರೋನ ಜಿಲ್ಲೆಯ ಚಿತ್ರಣವನ್ನು ಬದಲಾಯಿಸ ಹೊರಟಂತಿದೆ. 
      ಪಾವೂರು ಗ್ರಾಮದ ಬಂಡಾರಮನೆ ನಿವಾಸಿಯಾದ ಹರಿಶ್ಚಂದ್ರ ಎಂಬವರು ಅನಾರೋಗ್ಯದಿಂದ ಮಂಗಳೂರಿನ ಯೇನಪೋಯ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ಪೀಡಿತರಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು. ಕೋವಿಡ್ ಕಾರಣದಿಂದ ಶವ ಸಂಸ್ಕಾರಕ್ಕೆ ಹಿಂದೆ- ಮುಂದೆ ನೋಡುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರಾದ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು SKSSFನಕಾರ್ಯಕರ್ತರನ್ನು ಕರೆದು ಶವ ಸಂಸ್ಕಾರದ ಜವಾಬ್ದಾರಿ ವಹಿಸಿಕೊಳ್ಳುವಂತೆ  ತಿಳಿಸಿದರು.
      ಅದರಂತೆ ತಕ್ಷಣವೇ ಕಾರ್ಯಪ್ರವರ್ತರಾದ  ಎಸ್ಕೆಎಸ್ಎಸ್ಎಫ್ ಕಾರ್ಯಕರ್ತರು ಶವ ಸಂಸ್ಕಾರದ ಜವಾಬ್ದಾರಿಯನ್ನು ವಹಿಸಿಕೊಂಡು ಕುಟುಂಬಸ್ಥರ ಸಮ್ಮುಖದಲ್ಲಿ ಮಂಗಳೂರಿನ ನಂದಿಗುಡ್ಡೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು. ಹಿಂದೂ ಧರ್ಮದ ಪದ್ಧತಿಯಂತೆ ಮುಸ್ಲಿಂ ಯುವಕರು ಶವ ಸಂಸ್ಕಾರ ನಡೆಸಿಕೊಟ್ಟದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
      ಕಾರ್ಯಾಚರಣೆಯಲ್ಲಿ SKSSF ಮಲಾರ್ ವಿಖಾಯ  ಚೇರ್ ಮ್ಯಾನ್ ಇರ್ಫಾನ್ ಡಿ, ವಿಖಾಯ ಮಲಾರ್ ತಂಡದ ಅಬ್ದುಲ್ ಸಮದ್ ಕೆ.ಎಂ, ಇಮ್ತಿಯಾಝ್ ಬದ್ರಿಯಾ ನಗರ, ಬಶೀರ್.ಆರ್, ನೌಶಾದ್ ಮಲಾರ್ ಇದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ