ಕೋವಿಡ್ ನಿಂದ ಅನಾಥರಾದ ಮಕ್ಕಳಿಗೆ ಮಾಸಿಕ 2,500 ರೂ. ಮತ್ತು ಉಚಿತ ವಿದ್ಯಾಭ್ಯಾಸ: ಕೇಜ್ರಿವಾಲ್ ಘೋಷಣ

ಕೋವಿಡ್ ನಿಂದ ಅನಾಥರಾದ ಮಕ್ಕಳಿಗೆ ಮಾಸಿಕ 2,500 ರೂ. ಮತ್ತು ಉಚಿತ ವಿದ್ಯಾಭ್ಯಾಸ: ಕೇಜ್ರಿವಾಲ್ ಘೋಷಣ

ದೆಹಲಿ, ಮೇ18: ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಆ ಮಕ್ಕಳ 25ನೇ ವರ್ಷದವರೆಗೆ ಮಾಸಿಕ 2,500 ರೂ. ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.
      ಕೊರೋನಾ ಮತ್ತು ಲಾಕ್ ಡೌನ್ ನಿಂದಾಗಿ ಅನೇಕ ಮನೆಗಳು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿವೆ. ಈ ಸಂಕಷ್ಟವನ್ನು ನಿವಾರಿಸಲು ಜನರಿಗೆ ಹೇಗೆ ಸಹಾಯ ಮಾಡಬೇಕೆಂಬುದರ ಕುರಿತು ನಾವು ಯೋಚಿಸುತ್ತಿದ್ದೇವೆ‌. ಈ ಕಠಿಣ ಸಮಯದಲ್ಲಿ ಪರಿಹಾರ ನೀಡಲು ನಾಲ್ಕು ಹಂತಗಳನ್ನು ಕಂಡುಕೊಂಡಿದ್ದೇವೆ ಎಂದು ಅವರು ಹೇಳಿದರು.

  • ಎಲ್ಲಾ ಪಡಿತರ ಚೀಟಿಗಳನ್ನು ಹೊಂದಿರುವವರಿಗೆ ದೆಹಲಿ ಸರಕಾರದಿಂದ 5ಕೆಜಿ ಮತ್ತು ಕೆಂದ್ರ ಸರಕಾರದಿಂದ 5ಕೆಜಿ ಪಡಿತರವನ್ನು ಉಚಿತವಾಗಿ ನೀಡಲಾಗುವುದು.
  • ಪಡಿತರ ಚೀಟಿ ಹೊಂದಿಲ್ಲದವರು ದೆಹಲಿ ಸರಕಾರದ ಮುಂದೆ ಬೇಡಿಕೆ ಇಟ್ಟರೆ ಅಥವಾ ಯಾರಾದರೂ ಬಡವರೆಂದು ಹೇಳಿದರೆ ಯಾವುದೇ ಪುರಾವೆ ಇಲ್ಲದೆ ಅಂತಹವರಿಗೂ ಪಡಿತರ ನೀಡಲಾಗುವುದು.
  • ಕೊರೋನಾದಿಂದ ಪ್ರಾಣ ಕಳೆದುಕೊಂಡ ಪ್ರತೀ ಕುಟುಂಬಕ್ಕೆ ಸಹಾಯಧನವಾಗಿ 50,000 ರೂಪಾಯಿಗಳನ್ನು ನೀಡಲಾಗುವುದು. ಮೃತ ವ್ಯಕ್ತಿ ಕುಟುಂಬದ ಆಧಾರಸ್ಥನಾಗಿದ್ದರೆ  2,500ರೂ. ಪೆನ್ಶನ್ ನೀಡಲಾಗುವುದು.
  • ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲಾಗುವುದು ಮತ್ತು ಆ ಮಗುವಿನ 25ನೇ ವರ್ಷದ ತನಕ ಮಾಸಿಕ 2,500 ರೂ. ನೀಡಲಾಗುವುದು.

      ಸರಕಾರವು ಇಷ್ಟೊಂದು ಹಣವನ್ನು ಎಲ್ಲಿಂದ ತರುತ್ತದೆ ಎಂದು ಹಲವರು ಕೇಳುತ್ತಾರೆ. ನಾವು ಅದನ್ನು ಕಾರ್ಯರೂಪಕ್ಕೆ ತರಲು ಸಮರ್ಥರಾಗಿದ್ದೇವೆ. ಯಾಕೆಂದರೆ ದೆಹಲಿಯ ಜನತೆ ಪ್ರಾಮಾಣಿಕ ಸರಕಾರವನ್ನು ಆಯ್ಕೆ ಮಾಡಿದ್ದಾರೆ ಮತ್ತು ನಾವು ದಕ್ಷತೆಯಿಂದ ಹಣವನ್ನು ಉಳಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ