ಕಲ್ಲು ತೂರುವುದು ಮುಸ್ಲಿಮರ ಸಂಸ್ಖೃತಿ: ಸಂಸದ ಪ್ರತಾಪ ಸಿಂಹ

ಕಲ್ಲು ತೂರುವುದು ಮುಸ್ಲಿಮರ ಸಂಸ್ಖೃತಿ: ಸಂಸದ ಪ್ರತಾಪ ಸಿಂಹ

ಮೈಸೂರು: 'ಕಲ್ಲು ಹೊಡೆಯುವುದೇ ಮುಸ್ಲಿಮರ ಸಂಸ್ಕೃತಿಯಾಗಿದೆ. ಹಿಂದೂ ಹಬ್ಬಗಳ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸುತ್ತಾರೆ. ಹಿಂದೂಗಳನ್ನು ಸೈತಾನರಂತೆ ನೋಡುತ್ತಾರೆ' ಎಂದು ಸಂಸದ ಪ್ರತಾಪ ಸಿಂಹ ಆರೋಪಿಸಿದ್ದಾರೆ.

      'ಮುಸ್ಲಿಮರು ಮನಸ್ಥಿತಿ ಬದಲಿಸಿಕೊಳ್ಳಬೇಕು. ಕಲ್ಲು ತೂರುವ ಸಂಸ್ಕೃತಿ ಬಿಡಬೇಕು. ಇಲ್ಲದಿದ್ದರೆ ಕಲ್ಲು ತೂರುವವರ ಮನೆ ಬಳಿಗೆ ಬುಲ್ಡೋಜರ್ ಬರಲಿದೆ' ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

      'ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಸಂಭವಿಸಿದ ಗಲಭೆಗಳಲ್ಲಿ ಮುಸ್ಲಿಮರ ಮನಸ್ಥಿತಿ ಹೇಗಿದೆ ಎಂಬುದು ಗೊತ್ತಾಗಿದೆ. ಮುಸ್ಲಿಮರ ಮೆರವಣಿಗೆ ಮೇಲೆ ಹಿಂದೂಗಳು ಯಾವತ್ತೂ ಕೂಡ ಕಲ್ಲು ತೂರಾಟ ನಡೆಸಿಲ್ಲ. ಕ್ರಿಶ್ಚಿಯನ್, ಪಾರ್ಸಿಗಳು ಸೇರಿದಂತೆ ಯಾವುದೇ ಧರ್ಮೀಯರು ಕಲ್ಲು ತೂರುವುದಿಲ್ಲ' ಎಂದರು.

ಸಿದ್ದರಾಮಯ್ಯಗೆ ತಿರುಗೇಟು: ಪ್ರಧಾನಿ ಮೋದಿ ಸರ್ಕಾರದ ಅವಧಿಯಲ್ಲಿ ಅಂಬಾನಿ, ಅದಾನಿಯವರ ಆದಾಯ ದುಪ್ಪಟ್ಟಾಗಿದೆ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು, 'ಯಾವ ಹೊಲದಲ್ಲಿ ಆಲೂಗೆಡ್ಡೆ, ಜೋಳ ಬೆಳೆದು ನಿಮ್ಮ ನಾಯಕರು ಶ್ರೀಮಂತರಾದರು? 30 ವರ್ಷಗಳ ಹಿಂದೆ ಕೆ.ಜೆ. ಜಾರ್ಜ್, ಎಂ.ಬಿ.ಪಾಟೀಲ, ಡಿ.ಕೆ. ಶಿವಕುಮಾರ್ ಹೇಗಿದ್ದರು? ಅಂಬಾನಿ, ಅದಾನಿಯವರೆಲ್ಲಾ ಉದ್ಯಮಿಗಳು. ಅವರು ಹಣವನ್ನು ದುಪ್ಪಟ್ಟು ಮಾಡಬೇಕೆಂದೇ ಯೋಚಿಸುತ್ತಾರೆ. ಆದರೆ, ರಾಜಕಾರಣಿಗಳು ಇಷ್ಟೊಂದು ಶ್ರೀಮಂತರಾಗಲು ಹೇಗೆ ಸಾಧ್ಯವಾಯಿತು' ಎಂದು ಪ್ರಶ್ನಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ