ಕಿಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ: ಎಸ್‌ಕೆಎಸ್‌ಎಸ್‌ಎಫ್ ಪೆರ್ದಾಡಿ ಶಾಖೆಯಿಂದ ಶ್ರಮದಾನ

ಬೆಳ್ತಂಗಡಿ: ಇಲ್ಲಿಗೆ ಸಮೀಪದ ಕಿಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಎಸ್‌ಕೆಎಸ್‌ಎಸ್‌ಎಫ್ ಪೆರ್ದಾಡಿ ಶಾಖೆಯ ವಿಖಾಯ ಕಾರ್ಯಕರ್ತರು ಶ್ರಮದಾನದ ಮೂಲಕ ಸ್ವಚ್ಚ ಗೊಳಿಸಿದರು.
ಕೊರೋನಾ ಲಾಕ್‌ಡೌನ್ ಕಾರಣ ಸುದೀರ್ಘ ಕಾಲದಿಂದ ಶಾಲಾ ತರಗತಿಗಳು ನಡೆಯದೆ ಮಕ್ಕಳ ಓಡಾಟವೂ ಇಲ್ಲದೆ ಪರಿಸರದಲ್ಲಿ ಹುಲ್ಲು ಗಿಡಗಂಟಿಗಳು ತುಂಬಿಕೊಂಡಿದ್ದವು. ಎಸ್‌ಕೆಎಸ್‌ಎಸ್‌ಎಫ್ ಪೆರ್ದಾಡಿ ಶಾಖೆಯ ವಿಕಾಯ ಕಾರ್ಯಕರ್ತರು ಶ್ರಮದಾನದ ಮೂಲಕ ಶಾಲಾ ಪರಿಸರವನ್ನು ಶುಚಿಗೊಳಿಸಿದರು.
ವಿಖಾಯ ಕಾರ್ಯಕರ್ತರಾದ ಅಜ್ಮೀರ್ ಖಾಜಾ ಜುಮಾ ಮಸೀದಿ ಪೆರ್ದಾಡಿ ಇದರ ಅಧ್ಯಕ್ಷರಾದ ಪಿ.ಎ.ಉಸ್ಮಾನ್, ಎಸ್‌ಕೆಎಸ್‌ಎಸ್‌ಎಫ್ ಪೆರ್ದಾಡಿ ಶಾಖೆಯ ಅಧ್ಯಕ್ಷ ಪಿ.ಎ.ಮಹಮ್ಮದ್ ಪ್ರ.ಕಾರ್ಯದರ್ಶಿ ಮತ್ತು ವಿಖಾಯ ಚೇರ್ಮೆನ್ ಇಲ್ಯಾಸ್ ಅಝ್ಹರಿ, ಕಾರ್ಯದರ್ಶಿ ಸಿನಾನ್ ಪಿ.ಎ. ವಿಖಾಯ ಕಾರ್ಯಕರ್ತರಾದ ಮುಸ್ತಫಾ ಪಿ.ಎ, ಸಫ್ವಾನ್ ಪಿ.ಎ, ಹಕೀಂ ಪೆರ್ದಾಡಿ, ಇರ್ಫಾನ್ ಕೊಲ್ಲಿಬೆಟ್ಟು, ಉನೈಸ್ ಪಿ.ಎ, ಮಹಮ್ಮದ್ ಕುರುಬೆಗುಡ್ಡೆ ಮುಂತಾದವರು ಶಾಲಾ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರಾದ ಪ್ರಭಾಕರ್ ಹಾಗೂ ಪಂಚಾಯತ್ ಸದಸ್ಯರಾದ ಶಾಹುಲ್ ಹಮೀದ್ ಕಿಲ್ಲೂರು ಉಪಸ್ಥಿತಿತರಿದ್ದರು. ಶಾಲಾ ಅಧ್ಯಾಪಕ ವೃಂದದವರು ಉತ್ತಮ ರೀತಿಯಲ್ಲಿ ಸಹಕಾರ ನೀಡಿ ಪ್ರೂತ್ಸಾಹಿಸಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ