ಕಾರು ಅಪಘಾತದಲ್ಲಿ ಭಾರತದ ಕ್ರಿಕೆಟಿಗ ರಿಷಭ್‌ ಪಂತ್‌ಗೆ ಗಾಯ

ಕಾರು ಅಪಘಾತದಲ್ಲಿ ಭಾರತದ ಕ್ರಿಕೆಟಿಗ ರಿಷಭ್‌ ಪಂತ್‌ಗೆ ಗಾಯ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ರಿಷಭ್‌ ಪಂತ್‌ ಇಂದು ಬೆಳಗ್ಗೆ ದೆಹಲಿ-ಡೆಹ್ರಾಡೂನ್‌ ಹೆದ್ದಾರಿಯಲ್ಲಿ ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.

      25 ವರ್ಷದ ಪಂತ್‌ ಅವರ ತಲೆ ಮತ್ತು ಕಾಲಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಬೆನ್ನಿಗೆ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ.

      ಪಂತ್‌ ಅವರ ಬಿಎಂಡಬ್ಳ್ಲು ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ.

      ಕ್ರಿಕೆಟಿಗ ರಿಷಬ್ ಪಂತ್ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ರೂರ್ಕಿಗೆ ಹೋಗುತ್ತಿದ್ದರು. ಅವರು ಚಕ್ರದಲ್ಲಿ ನಿದ್ರಿಸಿದ ಕಾರಣ ಅಪಘಾತ ಸಂಭವಿಸಿದೆ, ರೂರ್ಕಿ ಕಡೆಗೆ ನರ್ಸನ್‌ನಿಂದ 1 ಕಿಮೀ ಮುಂದೆ: ಎಸ್‌ಕೆ ಸಿಂಗ್, ಎಸ್‌ಪಿ ಗ್ರಾಮಾಂತರ, ಹರಿದ್ವಾರ

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ