ಕರಾವಳಿಯನ್ನು ಸಂಪೂರ್ಣ ಕಡೆಗಣಿಸಿದ ಬಜೆಟ್ - ಯು.ಟಿ.ಖಾದರ್

ಕರಾವಳಿಯನ್ನು ಸಂಪೂರ್ಣ ಕಡೆಗಣಿಸಿದ ಬಜೆಟ್ - ಯು.ಟಿ.ಖಾದರ್
republicday728
republicday468
republicday234

ಬೆಂಗಳೂರು: ರಾಜ್ಯ ಬಜೆಟ್ ಯಾವುದೇ ಹೊಸ ಅಭಿವೃದ್ದಿ ಯೋಜನೆಯಿಲ್ಲದ ಶೂನ್ಯ ಬಜೆಟ್ ಆಗಿದ್ದು ಕಾಟಾಚರಕ್ಕೆ ಬಜೆಟ್ ಮಂಡಿಸಿದಂತಿದೆ ಎಂದು ಶಾಸಕ ಯು.ಟಿ.ಖಾದರ್ ಪ್ರತಿಕ್ರಿಯೆ ವ್ಯಕ್ತ ಪಡಿಸಿದರು‌. ದೈನಂದಿನ ಬಳಕೆಯ ಸಾಮಗ್ರಿಗಳ ಬೆಲೆ ತಾರಕಕ್ಕೇರುತ್ತಿದ್ದರೂ ಅವುಗಳನ್ನು ತಡೆಗಟ್ಟಲು ಬೇಕಾದ ಯಾವುದೇ ಹೊಸ ಯೋಜನೆಗಳಿಲ್ಲ. ಪೆಟ್ರೋಲ್, ಡಿಸೇಲ್, ಗ್ಯಾಸ್ ಮುಂತಾದ ಜನಬಳಕಯೆ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಯಾವುದೇ ಯೋಜನೆಗಳಿಲ್ಲ. ಕರಾವಳಿಯಲ್ಲಿ ಬಿಜೆಪಿಯ 13 ಶಾಸಕರಿದ್ದರೂ ಕೂಡಾ ಕರಾವಳಿಯ ಅಭಿವೃದ್ದಿಗೆ ಯಾವುದೇ ಹೊಸ ಯೋಜನೆಗಳಿಲ್ಲ. ಪಶ್ಚಿಮ ವಾಹಿನಿ ಕಿಂಡಿ ಅಣೆಕಟ್ಟು ಒಂದನ್ನು ಬಿಟ್ಟರೆ ಕರಾವಳಿಯನ್ನು ಸಂಪೂರ್ಣ ಕಡೆಗಣಿಸಿಲಾಗಿದೆ.

      ಕರಾವಳಿಯ ಪ್ರಮುಖ ಉದ್ಯೋಗಿಗಳಾದ ಮೀನುಗಾರರನ್ನೂ ರಾಜ್ಯ ಬಜೆಟ್ ನಲ್ಲಿ ಸಂಪೂರ್ಣ ಕಡೆಗಣಿಸಿದ್ದು ವಿಷಾದನೀಯ. ಮೀನುಗಾರರಿಗೆ ಯಾವುದೇ ಯೋಜನೆಯನ್ನು ಘೋಷಿಸದೆ ಅವರಿಗೆ ಅನ್ಯಾಯ ಮಾಡಲಾಗಿದೆ. ಅವಹೇಳಿಸಲಾಗಿದೆ. ಕರಾವಳಿಯಲ್ಲಿ ಬಿಜೆಪಿಯ 13 ಜನ ಶಾಸಕರಿದ್ದರೂ ಕೂಡಾ ಕರಾವಳಿಗೆ ಆದ ಅನ್ಯಾಯದ ಬಗ್ಗೆ ಧ್ವನಿ ಎತ್ತದೇ ಇರುವುದು ವಿಷಾದನೀಯ ಎಂದು ಖಾದರ್ ಬೇಸರ ವ್ಯಕ್ತಪಡಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ