ಕಾರವಾರ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ: 17 ಮಂದಿ ಮೀನುಗಾರರ ರಕ್ಷಣೆ.

ಕಾರವಾರ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ: 17 ಮಂದಿ ಮೀನುಗಾರರ ರಕ್ಷಣೆ.

ಕಾರವಾರ : ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕಾ ಬೋಟ್ ಅಪಘಾತಕ್ಕೀಡಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅರಬ್ಬಿ ಸಮುದ್ರದಲ್ಲಿ ಸಂಭವಿಸಿದೆ.

      ಬೋಟ್ ನಲ್ಲಿದ್ದ 17ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಿಸಿ ದಡಕ್ಕೆ ತಂದಿದೆ. ಕುಮಟಾ ತಾಲೂಕಿನ ಸಮೀಪದ ಕಡ್ಲೆ ಬಳಿ ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದೆ.

      ಸುಧಾಕರ್ ಕಾರ್ವಿ ಅವರ ಮಾಲೀಕತ್ವದ “ಶ್ರೀ ದೇವಿ ಅನುಗ್ರಹ ” ಎಂಬ ಹೆಸರಿನ ಪರ್ಸಿನ್ ಬೋಟ್ ಮೀನುಗಾರಿಕೆ ನಡೆಸಿ ವಾಪಸ್ ಆಗುತ್ತಿದ್ದಾಗ, ಬಂಡೆಕಲ್ಲಿಗೆ ಡಿಕ್ಕಿ ಹೊಡೆದಿದೆ.

      ಈ ಸಂದರ್ಭ ದೋಣಿಯೊಳಗೆ ನೀರು ತುಂಬಲು ಆರಂಭವಾಗಿ ದೋಣಿ ಮುಳುಗಡೆ ಹತಕ್ಕೆ ತಲುಪಿದ್ದು ಕೂಡಲೇ ಸಹಾಯಕ್ಕಾಗಿ ಕೋಸ್ಟಲ್ ಸೆಕ್ಯೂರಿಟಿ ಫೋರ್ಸನ್ನು ಸಂಪರ್ಕಿಸಲಾಗಿದೆ.

      ಕೂಡಲೇ ಕಾರ್ಯಾಚರಣೆ ನಡೆಸಿದ್ದ ಕರಾವಳಿ ಕಾವಲು ಪಡೆ ಬೋಟ್ ನಲ್ಲಿದ್ದ 17ಮಂದಿ ಮೀನುಗಾರರನ್ನು ರಕ್ಷಣೆ ಮಾಡಿ ದಡಕ್ಕೆ ಕರೆದುಕೊಂಡು ಬಂದಿದ್ದಾರೆ.

      ಇನ್ನು ಬೋಟ್ ಮುಳುಗಡೆಯಾಗಿರುವುದರಿಂದ 10 ಲಕಕ್ಕೂ ಹೆಚ್ಚು ಮೌಲ್ಯದ ಸೊತ್ತುಗಳು ಸಮುದ್ರಪಾಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ