ಕರ್ನಾಟಕ ಪಿಯುಸಿ ಪರೀಕ್ಷೆ ರದ್ದು: ಸುರೇಶ್ ಕುಮಾರ್

ಕರ್ನಾಟಕ ಪಿಯುಸಿ ಪರೀಕ್ಷೆ ರದ್ದು: ಸುರೇಶ್ ಕುಮಾರ್

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪರೀಕ್ಷೆ ಇಲ್ಲದೆ ಯಾವ ರೀತಿ ಗ್ರೇಡ್ ಕೊಡಬೇಕು ಎಂದು ಬಹಳ ಯೋಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.

      ಮಕ್ಕಳ ಯೋಗಕ್ಷೇಮ ಮತ್ತು ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದ್ದಾರೆ.

      ಎಸ್ಸೆಸ್ಸೆಎಲ್ಸಿ, ಪಿಯುಸಿ ಪರೀಕ್ಷೆ ಈ ವರ್ಷ ಬಹು ಚರ್ಚಿತ ವಿಚಾರವಾಗಿತ್ತು. ಕಳೆದ ವರ್ಷದ ಪರಿಸ್ಥಿತಿ ಬೇರೆಯೇ ಇತ್ತು. ಹೇಗೋ ಮುಂಜಾಗ್ರತೆ ತೆಗೆದುಕೊಂಡು ಪರೀಕ್ಷೆ ನಡೆಸಿದ್ದೆವು.

      ಈ ವರ್ಷ ಎರಡನೇ ಅಲೆ ಇರುವುದರಿಂದ ಪರಿಸ್ಥಿತಿ ಬೇರೆಯೇ ಇದೆ. ಒಂದು ವರ್ಗ ಪರೀಕ್ಷೆ ನಡೆಸಬೇಕು ಎಂದರೆ ಕೆಲವರು ಬೇಡ ಎನ್ನುತ್ತಿದ್ದಾರೆ. ಹೀಗಾಗಿ, ಬಿಇಓಗಳ ಮೂಲಕ ಮಕ್ಕಳು ಮತ್ತು ಪೋಷಕರ ಅಭಿಪ್ರಾಯ ಪಡೆದಿದ್ದೆವೆ. ಈ ವರ್ಷವೂ ಪರೀಕ್ಷೆಗೆ ತಯಾರಿ ನಡೆಸಿದ್ದೆವು. ಆದರೆ, ಕಳೆದ ಮೂರು ದಿನಗಳಿಂದ ಈ ನಿರ್ಧಾರ ಮರುಪರಿಶೀಲನೆ ಬಗ್ಗೆ ಚರ್ಚೆ ನಡೆಸಿದ್ದೇನೆ. ಶಿಕ್ಷಣ ತಜ್ಞರ ಅಭಿಪ್ರಾಯ ಸಹ ಪಡೆದಿದ್ದೇನೆ ಎಂದು ಹೇಳಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ