ಕರ್ನಾಟಕ ಅನ್ ಲಾಕ್ 4.0: ಇಂದಿನಿಂದ ಜಾರಿ

ಕರ್ನಾಟಕ ಅನ್ ಲಾಕ್ 4.0: ಇಂದಿನಿಂದ ಜಾರಿ

ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ, ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಕರ್ನಾಟಕ ಅನ್ಲಾಕ್ 4.0 ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ಅನ್ ಲಾಕ್ 4.0 ಮಾರ್ಗಸೂಚಿಯು ಇಂದಿನಿಂದ ಜಾರಿಗೊಳ್ಳಲಿದೆ.

      ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ನೂತನ ಅನ್ ಲಾಕ್ 4.0 ಮಾರ್ಗಸೂಚಿ ಕ್ರಮಗಳ ಆದೇಶವನ್ನು ಹೊರಡಿಸಿದ್ದಾರೆ. ಅದರಂತೆ ರಾಜ್ಯಾದ್ಯಂತ ಇಂದಿನಿಂದ ರಾತ್ರಿ ಕರ್ಪ್ಯೂ ಅವಧಿಯನ್ನು ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನಿಗಧಿ ಪಡಿಸಲಾಗಿದೆ. ಸಿನಿಮಾ ಹಾಲ್, ಮಲ್ಟಿ ಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಆಡಿಟೋರಿಯಂ ಮತ್ತು ಸಮಾನ ಸ್ಥಳಗಳನ್ನು ಶೇ.50ರಷ್ಟು ಜನರೊಂದಿಗೆ ಕೊರೋನಾ ಮಾರ್ಗಸೂಚಿ ಕ್ರಮಗಳನ್ನು ಅನುಸರಿಸಿ ತೆರೆಯೋದಕ್ಕೆ ಅವಕಾಶ ನೀಡಲಾಗಿದೆ.

      ಇದಷ್ಟೇ ಅಲ್ಲದೇ ಕಾಲೇಜ್ ಮತ್ತು ಇನ್ ಸ್ಟಿಟ್ಯೂಷನ್ ಗಳನ್ನು ಡಿಪಾರ್ಟಮ್ಮೆಂಟ್ ಆಫ್ ಹೈಯರ್ ಎಜುಕೇಷನ್ ನಿರ್ದೇಶನದಂತೆ, ಕೋವಿಡ್ ಮಾರ್ಗಸೂಚಿ ಕ್ರಮಗಳ ಪಾಲನೆಯೊಂದಿಗೆ ಜುಲೈ 26ರಿಂದ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಕಾಲೇಜಿಗೆ ಆಗಮಿಸುವಂತಹ ವಿದ್ಯಾರ್ಥಿಗಳು, ಉಪನ್ಯಾಸಕರು, ಮತ್ತು ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಒಂದು ಡೋಸ್ ಕೊರೋನಾ ಲಸಿಕೆ ಪಡೆದಿರೋ ಮಾನದಂಡವನ್ನು ನಿಗದಿಪಡಿಸಿದೆ. ವಿದ್ಯಾರ್ಥಿಗಳ ಹಾಜರಾತಿ ಐಚ್ಛಿಕವಾಗಿರುತ್ತದೆ ಎಂದು ತಿಳಿಸಿದೆ.
ದೀರ್ಘಕಾಲೀನ ತಾಂತ್ರಿಕ ಕೋರ್ಸ್ ಗಳು ಸೇರಿದಂತೆ ಎಲ್ಲಾ ಕೌಶಲ್ಯ ಅಭಿವೃದ್ಧಿ ತರಬೇತಿಗಳು ಕೋವಿಡ್ ನಡವಳಿಕೆಯ ಕಟ್ಟುನಿಟ್ಟು ಪಾಲನೆಯ ನಿಯಮಕ್ಕೆ ಒಳಪಟ್ಟು ತೆರೆಯಲು ಅನುಮತಿಸಲಾಗಿದೆ.  ಆದರೆ ವಿದ್ಯಾರ್ಥಿಗಳು, ಬೋಧನೆ ಮತ್ತು ಬೋಧಕೇತರ /ಇತರ ಸಿಬ್ಬಂದಿ ಕೋವಿಡ್-19 ಲಸಿಕೆಯ ಒಂದು ಡೋಸ್ ಗೆ ಪಡೆದಿರುವವರಿಗೆ ಮಾತ್ರ ಕಾಲೇಜಿಗೆ ಹಾಜರಾಗಲು ಅನುಮತಿಸಲಾಗಿದೆ.

      ಮುಂದಿನ ಆದೇಶದವರೆಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಬರುವಂತಹ ಪ್ರಯಾಣಿಕರಿಗೆ ದಿನಾಂಕ ಜುಲೈ ಮೂರರ ಆದೇಶದಲ್ಲಿ ತಿಳಿಸಿದ ಮಾರ್ಗಸೂಚಿ ಕ್ರಮಗಳೇ ಮುಂದುವರೆಯಲಿವೆ. ಇದೀಗ ಹೊರಡಿಸಿರುವಂತಹ ಅನ್ ಲಾಕ್ 4.0 ಮಾರ್ಗಸೂಚಿ ಕ್ರಮಗಳು ಆಗಸ್ಟ್ 2 ರವರೆಗೆ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ