'ಕ್ಯಾಂಪಸ್ ಗೇಟ್ ಮೀಟ್' ಅಭಿಯಾನ ಕ್ಕೆ ಎನ್. ಎಸ್.ಯು.ಐ ಚಾಲನೆ

'ಕ್ಯಾಂಪಸ್ ಗೇಟ್ ಮೀಟ್' ಅಭಿಯಾನ ಕ್ಕೆ ಎನ್. ಎಸ್.ಯು.ಐ ಚಾಲನೆ
republicday728
republicday468
republicday234

ಮಂಗಳೂರು: ದ.ಕ.ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ  ಒಂದು ತಿಂಗಳ ಕಾಲ ನಡೆಯಲಿರುವ‘ಕ್ಯಾಂಪಸ್ ಗೇಟ್ ಮೀಟ್’ ಅಭಿಯಾನಕ್ಕೆ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ರವರು ಸೋಮವಾರ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಚಾಲನೆ ನೀಡಿದರು.
      ಅಭಿಯಾನದಲ್ಲಿ ಎನ್. ಎಸ್.ಯು.ಐ ಪದಾಧಿಕಾರಿಗಳು ವಿವಿಧ ಕಾಲೇಜ್ ಕ್ಯಾಂಪಸ್ ಗಳಿಗೆ ತೆರಳಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಲಿರುವರು. ಅಗತ್ಯ ಬಂದರೆ ಹೋರಾಟವನ್ನು ಸಂಘಟಿಸುವರು. ಅಲ್ಲದೆ, ಸ್ಕಾಲರ್ ಶಿಪ್, ಬಸ್ ಪಾಸ್, ಕಾಲೇಜು ಶುಲ್ಕ, ರ಼್ಯಾಗಿಂಗ್, ಮಾದಕ ದ್ರವ್ಯಗಳ ಬಗ್ಗೆ ಜನ ಜಾಗೃತಿ ನಡೆಯಲಿದೆ ಎಂದು ಸವಾದ್ ಸುಳ್ಯ ಹೇಳಿದರು.
      ಏಕ ಕಾಲದಲ್ಲಿ ಜಿಲ್ಲೆಯ ಸುಳ್ಯ, ಮೂಡಬಿದ್ರಿ, ಸುಬ್ರಹ್ಮಣ್ಯ, ಬಂಟ್ವಾಳ ತಾಲೂಕಿನ ಹಲವು ಕಾಲೇಜ್ ಗಳಲ್ಲಿ ಇಂದು ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಮಂಗಳೂರು ಅಧ್ಯಕ್ಷರಾದ ಶೌನಕ್ ರೈ, ಮನಾಲಿ, ಸುಳ್ಯ ಅಧ್ಯಕ್ಷ ಕೀರ್ತನ್ ಗೌಡ ಕೊಡಪಾಳ, ಆಶಿಕ್, ಪವನ್, ನಿಶಾಮ್, ಕೌಶಿಕ್ ಭಾಗವಹಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ