ಕಾಬೂಲ್‌ ವಿಮಾನ ನಿಲ್ದಾಣದ ಹೊರಗೆ ಆತ್ಮಾಹುತಿ ದಾಳಿ: ಕನಿಷ್ಠ 13ಕ್ಕೂ ಹೆಚ್ಚು ಸಾವು

ಕಾಬೂಲ್‌ ವಿಮಾನ ನಿಲ್ದಾಣದ ಹೊರಗೆ ಆತ್ಮಾಹುತಿ ದಾಳಿ: ಕನಿಷ್ಠ 13ಕ್ಕೂ ಹೆಚ್ಚು ಸಾವು

ಕಾಬೂಲ್: ಕಾಬೂಲ್‌ನ ಹಮೀದ್‌ ಕರ್ಝಾಯಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಸಂಭವಿಸಿದ ಅವಳಿ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 13 ಮಂದಿ ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದುರಷ್ಯಾದ ವಿದೇಶಾಂಗ ಸಚಿವಾಲಯ ಹೇಳಿದೆ.

      ವಿಮಾನ ನಿಲ್ದಾಣದ ಮೇಲೆ ಆತ್ಮಾಹುತಿ ಬಾಂಬರ್‌ಗಳು ಬೆದರಿಕೆ ಹಾಕುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿಯಿದೆ ಎಂದು ಯುಎಸ್ ಮತ್ತು ಮಿತ್ರ ಅಧಿಕಾರಿಗಳು ಹೇಳಿದ್ದಾರೆ. ಅವಳಿ ಸ್ಪೋಟವನ್ನು ದೃಢಪಡಿಸಿದ ಪೆಂಟಗನ್ ಸಾವುನೋವುಗಳ ಬಗ್ಗೆ ತಕ್ಷಣಕ್ಕೆ ಏನನ್ನೂ ತಿಳಿಸಿಲ್ಲ.

      "ನಾವು ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸ್ಫೋಟವನ್ನು ಖಚಿತಪಡಿಸಬಹುದು. ಈ ಸಮಯದಲ್ಲಿ ಸಾವುನೋವುಗಳು ಸ್ಪಷ್ಟವಾಗಿಲ್ಲ. ನಾವು ಸಾಧ್ಯವಾದಾಗ ಹೆಚ್ಚುವರಿ ವಿವರಗಳನ್ನು ನೀಡುತ್ತೇವೆ" ಎಂದು ಪೆಂಟಗನ್ ವಕ್ತಾರ ಜಾನ್ ಕಿರ್ಬಿ ಹೇಳಿದರು.

      ಅಬ್ಬೆ ಗೇಟ್‌ನಲ್ಲಿ ಸಂಭವಿಸಿದ ಸ್ಫೋಟದ ಪರಿಣಾಮವಾಗಿ ಅನೇಕ ಯುಎಸ್ ಮತ್ತು ಸ್ಥಳೀಯ ನಾಗರಿಕರ ಸಾವುನೋವುಗಳಿಗೆ ಕಾರಣವಾಗಿದೆ ಎಂದು ನಾವು ದೃಢೀಕರಿಸುತ್ತೇವೆ. ಅವಳಿ ಸ್ಪೋಟಗಳನ್ನೂ ಜಾನ್‌ ಕಿರ್ಬಿ ದೃಢೀಕರಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ