ಕುಂಬ್ರ ರೇಂಜ್ ಮದ್ರಸ ಅಧ್ಯಾಪಕರ ಕಾರ್ಯಾಗಾರ ತಂಶೀತ್-2020

ಕಾವು: ಕೋವಿಡ್ -19ರ ಪರಿಣಾಮ ಮುಚ್ಚಲಾಗಿದ್ದ ಮದರಸಗಳು ಬಾಗಿಲುಗಳು ಮತ್ತೆ ತೆರೆಯಲು ಸಿದ್ಧವಾಗುತ್ತಿದೆ. ಮದ್ರಸ ಅಧ್ಯಾಪಕರು ಎಚ್ಚೆತ್ತುಕೊಂಡು ವಿಶೇಷ ಹುರುಪಿನೊಂದಿಗೆ ಕಾರ್ಯಕ್ಷೇತ್ರಕ್ಕೆ ಧುಮುಕ ಬೇಕೆಂದು ಸಮಸ್ತ ವಿದ್ಯಾಭ್ಯಾಸ ಮಂಡಳಿಯ ಮುಫತ್ತಿಶ್ ಎಂ.ಎ. ಕಾಸಿಂ ಮುಸ್ಲಿಯಾರ್ ಅಧ್ಯಾಪಕರುಗಳಿಗೆ ಕರೆ ನೀಡಿದರು. ಅವರು ಕುಂಬ್ರ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಹಮ್ಮಿಕೊಂಡ ರೇಂಜ್ ಮಟ್ಟದ ಮುಅಲ್ಲಿಂ ಕಾರ್ಯಾಗಾರ ಶಬಿರ ತಂಶೀತ್-2020 ಇದರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮದ್ರಸದ ಪ್ರಮುಖ ಘಟಕವಾದ ಅಧ್ಯಾಪಕರ ಸೇವೆಯು ಶ್ರೇಷ್ಟ ಸೇವೆಯಾಗಿದ್ದು, ಅಧ್ಯಾಪಕ ವೃತ್ತಿಯ ಮೌಲ್ಯವನ್ನು ಯಾರಿಂದಲೂ ಅಳೆಯಲು ಸಾಧ್ಯವಿಲ್ಲ. ಧರ್ಮಪ್ರಬೋಧನೆಗೆ ನಿಯುಕ್ತರಾದ ಲಕ್ಷಕ್ಕಿಂತಲೂ ಅಧಿಕ ಪ್ರವಾದಿಗಳ ಉತ್ತರಾಧಿಕಾರಿಗಳಾದ ಮುಅಲ್ಲಿಮರು ಪ್ರವಾದಿಗಳ ಜೀವನಶೈಲಿ ಮತ್ತು ಬೋಧನಾ ರೀತಿ-ರಿವಾಜುಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಬದ್ಧರಾಗಬೇಕೆಂದರು. ಸಮಸ್ತ ವಿದ್ಯಾಭ್ಯಾಸ ಮಂಡಳಿಯು ನಿರ್ದೇಶಿಸಿದಂತೆ ಬೋಧನಾ ಕೌಶಲ್ಯವನ್ನು ಉತ್ತಮಪಡಿಸಿಕೊಂಡು ಅಧ್ಯಾಪನ ಪ್ರಕ್ರಿಯೆಯಲ್ಲಿ ನವೀನ ಮಾದರಿಗಳನ್ನು ಸ್ವೀಕರಿಸಿ ವಿದ್ಯಾರ್ಥಿಗಳಿಗೆ ಆಕರ್ಷಿತರಾಗಬೇಕು. ಆನ್ಲೈನ್ ತರಗತಿಗಳಿಂದ ಆಕರ್ಷಿತರಾಗಿ ಅಧ್ಯಯನದ ಹೊಸ ಮಜಲುಗಳನ್ನು ಪರಿಚಯ ಮಾಡಿಕೊಂಡ ವಿದ್ಯಾರ್ಥಿಗಳ ಮುಂದೆ ಕ್ರಿಯಾಶೀಲ ಚಟುವಟಿಕೆಗಳೊಂದಿಗೆ ತರಗತಿ ನಡೆಸಬೇಕೆಂದರು.
ಮದರಸಾ ಆಡಳಿತ ಸಮಿತಿ ಹಾಗೂ ಪೋಷಕರು ಅಧ್ಯಾಪಕರ ಮೌಲ್ಯಗಳನ್ನು ಅರಿತು ಗೌರವಿಸಿ ಪರಸ್ಪರ ಉತ್ತಮ ರೀತಿಯ ಸಂವಹನದಲ್ಲಿರಬೇಕೆಂದರು.
ಇದೇ ಸಂದರ್ಭದಲ್ಲಿ ಕುಂಬ್ರ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಆಶ್ರಯದಲ್ಲಿ ಕಾರ್ಯಾಚರಿಸುವ ಮುಅಲ್ಲಿಂ ರಿಲೀಫ್ ಸೆಲ್ ನಿಂದ ರೇಂಜ್ ವ್ಯಾಪ್ತಿಯ ಮುಅಲ್ಲಿಮರಿಗೆ ಸಹಾಯಧನ ವಿತರಿಸಲಾಯಿತು. ಕುಂಬ್ರ ರೇಂಜ್ ಮದ್ರಸ ಮೇನೇಜ್ಮೆಂಟ್ ಅಧ್ಯಕ್ಷರಾದ ಹಿರಾ ಅಬ್ದುಲ್ ಖಾದರ್ ಹಾಜಿ ಯವರು ಸಹಾಯಧನ ವಿತರಿಸಿದರು.
ಈ ಸಂದರ್ಭದಲ್ಲಿ ರೇಂಜ್ ಅಧ್ಯಕ್ಷರಾದ ಶಂಸುದ್ದೀನ್ ದಾರಿಮಿ, ಉಪಾಧ್ಯಕ್ಷರಾದ ಸಿರಾಜುದ್ದೀನ್ ಫೈಝಿ ಮಾಡನ್ನೂರು, ಅಬ್ದು ಶುಕೂರ್ ದಾರಿಮಿ, ಪರೀಕ್ಷಾ ಮಂಡಳಿ ಚೇರ್ಮನ್ ಅಮೀರ್ ಅರ್ಶದಿ, ಮೇನೇಜ್ಮೆಂಟ್ ಸಾರಥಿ ಗಳಾದ ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ, ಆಲಿಕುಂಞಿ ಹಾಜಿ ಪಮ್ಮಲೆ, ಕಾವು ಮದ್ರಸ ಅಧ್ಯಕ್ಷರಾದ ಶರೀಫ್ , ಉಪಾಧ್ಯಕ್ಷ ಮುಹಮ್ಮದ್, ರೇಂಜ್ ಐ.ಟಿ ಕೋರ್ಡಿನೇಟರ್ ಲುಕ್ಮಾನುಲ್ ಹಕೀಮ್ ಫೈಝಿ ಬದ್ರಿಯಾ ನಗರ, ರೇಂಜ್ ನ ಪ್ರಮುಖ ಸಾರಥಿಗಳಾದ ಸದ್ರ್ ಉಸ್ತಾದರೂ ಹಾಗೂ ರೇಂಜ್ ವ್ಯಾಪ್ತಿಯ ಮುಅಲ್ಲಿಮರು ಉಪಸ್ಥಿತರಿದ್ದರು.ರೇಂಜ್ ಕಾರ್ಯದರ್ಶಿ ಸಿದ್ದೀಕ್ ಫೈಝಿ ಕೊಳ್ತಿಗೆ ಸ್ವಾಗತಿಸಿ, ಅಬ್ದು ನ್ನಾಸಿರ್ ಫೈಝಿ ತ್ಯಾಗರಾಜೆ ಧನ್ಯವಾದ ಅರ್ಪಿಸಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ