ಕಾಪುವಿನಲ್ಲಿ ಖಾತೆ ತೆರೆದ SDPI

ಕಾಪುವಿನಲ್ಲಿ ಖಾತೆ ತೆರೆದ SDPI

ಕಾಪು: ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಫಲಿತಾಂಶಗಳು ಬರಲಾರಂಭಿಸಿದ್ದು ಪಕ್ಷಗಳ ಕಾರ್ಯಕರ್ತರು ಅತ್ಯುತ್ಸಾಹದಲ್ಲಿದ್ದಾರೆ. ಕಾಪು ತಾಲೂಕಿನ ಬೆಳಪು ಗ್ರಾಮ ಪಂಚಾಯಿತಿಯಲ್ಲಿ ಇದೇ ಪ್ರಥಮ ಬಾರಿಗೆ ಎಸ್ಡಿಪಿಐ ತನ್ನ ಖಾತೆಯನ್ನು ತೆರೆದಿದೆ.

ಬೆಳಪು ಗ್ರಾಮ ಪಂಚಾಯಿತಿಯಲ್ಲಿ ನಸೀಮಾ ಹಾಗೂ ಫಹೀಮ್‌ ಎಂಬ ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ತಮ್ಮ ಪಕ್ಷದ ಖಾತೆಯನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಇದುವರೆಗೂ ಅಷ್ಟೇನೂ ಬಲ ಕಂಡುಕೊಳ್ಳದ ಎಸ್ಡಿಪಿಐ ಇದೀಗ ತನ್ನ ಅಸ್ತಿತ್ವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ