ಕತಾರ್‌ನಲ್ಲಿ ಭಾರತೀಯ ಯುವ ಉದ್ಯಮಿ ಶವವಾಗಿ ಪತ್ತೆ

ಕತಾರ್‌ನಲ್ಲಿ ಭಾರತೀಯ ಯುವ ಉದ್ಯಮಿ ಶವವಾಗಿ ಪತ್ತೆ

ದೋಹಾ : ಕತಾರ್ ರಾಜಧಾನಿ ದೋಹದಲ್ಲಿ ವ್ಯವಹಾರ ಮಾಡುತ್ತಿದ್ದ ಭಾರತೀಯ ಯುವ ಉದ್ಯಮಿ ಶವವಾಗಿ ಪತ್ತೆಯಾಗಿದ್ದಾರೆ.

      ಕೇರಳದ ಉದ್ಯಮಿ 29 ವರ್ಷದ ನಬೀಲ್ ದೋಹಾದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

      ನಬೀಲ್ ತ್ರಿಶೂರ್ನ ಚೆಮ್ಮಪ್ಪಿಲ್ಲಿಯ ಪೊಕಲ್ ಮನೆತನದ ದಿವಂಗತ ಶಂಸುದ್ದೀನ್ ಮತ್ತು ನೂರ್ ಜಹಾನ್ ಪುತ್ರನಾಗಿದ್ದು ಕಳೆದ ಕೆಲ ವರ್ಷಗಳಿಂದ ದೋಹದಲ್ಲಿ ವ್ಯವಹಾರ ಮಾಡಿಕೊಂಡಿದ್ದ ಎನ್ನಲಾಗಿದೆ.

      ಆದರೆ ಇದೀಗ ನೆಬೀಲ್ ಅವರ ನಿವಾಸದಲ್ಲೇ ಶವವಾಗಿ ಪತ್ತೆಯಾಗಿದ್ದಾರೆ. ಕತಾರ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದು ಸಾವಿನ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ