ಕಾಂಗ್ರೆಸ್ ಪ್ರತಿಭಟನೆ ನಾಳೆ: ಹರೀಶ್ ಕುಮಾರ್

ಕಾಂಗ್ರೆಸ್ ಪ್ರತಿಭಟನೆ ನಾಳೆ: ಹರೀಶ್ ಕುಮಾರ್

ಮಂಗಳೂರು, ಡಿ.23:  ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ರವರನ್ನು ಆಗಂತುಕರು ಅನುಮಾನಸ್ಪದ ರೀತಿಯಲ್ಲಿ ಹಿಂಬಾಲಿಸಿದ ಘಟನೆಯನ್ನು ದ.ಕ.ಜಿಲ್ಲಾ ಕಾಂಗ್ರೆಸ್ ತೀವೃವಾಗಿ ಖಂಡಿಸಿದೆ.

     ಕೂಡಲೇ ಪೊಲೀಸರು ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿ ಮತ್ತು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ನಾಳೆ ದಿನಾಂಕ 24 ಡಿಸೆಂಬರ್ 2020 ರಂದು ಬೆಳಿಗ್ಗೆ 10 ಗಂಟೆಗೆ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು . ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಹರೀಶ್ ಕುಮಾರ್ ತಿಳಿಸಿದ್ದಾರೆ.

     ಶಾಸಕರು ದೇರಳಕಟ್ಟೆಯಿಂದ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಅಪರಿಚಿತ ವ್ಯಕ್ತಿಯು ಅನುಮಾನಾಸ್ಪದ ರೀತಿಯಲ್ಲಿ ಶಾಸಕರ ಕಾರನ್ನು ಹಿಂಬಾಲಿಸಿದ್ದರು. ಶಾಸಕರ ಬೆಂಗಾವಲು ವಾಹನದ ಮುಖ್ಯಸ್ಥರು ಇದನ್ನು ಗಮನಿಸಿ ಕದ್ರಿ ಪೋಲೀಸ್ ಠಾಣೆಗೆ ವಿಷಯ ತಿಳಿಸಿದ್ದರು. ನಂತೂರು ಬಳಿ ಆತನನ್ನು ಬಂಧಿಸುವ ಪ್ರಯತ್ನದ ಮಧ್ಯೆ ಆತ ತಪ್ಪಿಸಿಕೊಂಡಿದ್ದಾನೆ. ವಾಹನದ ನಂಬರ್ ಪೋಲೀಸರು ಗುರುತಿಸಿಕೊಂಡು ಆರೋಪಿಗಾಗಿ ಬಕೆ ಬೀಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ