ಕೈಕಂಬ ಅಲ್-ಮದರಸತುಲ್ ಅಸ್ರಾರುದ್ದೀನ್: ಸಮಸ್ತ ಅಧೀನದಲ್ಲಿ ನೂತನ ಮದರಸ ಉದ್ಘಾಟನೆ

ಕೈಕಂಬ ಅಲ್-ಮದರಸತುಲ್ ಅಸ್ರಾರುದ್ದೀನ್: ಸಮಸ್ತ ಅಧೀನದಲ್ಲಿ ನೂತನ ಮದರಸ ಉದ್ಘಾಟನೆ
ಕೈಕಂಬ ಅಲ್-ಮದರಸತುಲ್ ಅಸ್ರಾರುದ್ದೀನ್: ಸಮಸ್ತ ಅಧೀನದಲ್ಲಿ ನೂತನ ಮದರಸ ಉದ್ಘಾಟನೆ

ಗುರುಪುರ, ಸೆ.1: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಬ್ಯಾಸ ಬೋರ್ಡ್ ಇದರ ಅಧೀನದಲ್ಲಿ ಅಲ್-ಮದ್ರಸತುಲ್ ಅಸ್ರಾರುದ್ದೀನ್ ಎಂಬ ಹೆಸರಿನ ನೂತನ ಮದ್ರಸವು ಗುರುಪುರ ಕೈಕಂಬದ ಅಸ್ರಾರುದ್ದೀನ್ ಮಸೀದಿ ಕಟ್ಟಡದಲ್ಲಿ ಇಂದು ಆರಂಭಗೊಂಡಿತು.

      ಮದರಸ ಅಧ್ಯಕ್ಷರಾದ ಮಾಮು ಮಳಲಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಗುರುಪುರ ರೇಂಜ್ ಜಂ-ಇಯ್ಯತುಲ್ ಮಅಲ್ಲಿಮೀನ್ ಅಧ್ಯಕ್ಷರಾದ ಜಮಾಲುದ್ದೀನ್ ದಾರಿಮಿ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕದ ವ್ಯವಸ್ಥೆಯನ್ನು ಕೈಕಂಬ ಅಲ್-ಬಿರ್ರ್ ಸ್ಕೂಲ್ ಚೇರ್ಮನ್ ಆಸಿಫ್ ಆದರ್ಶ್ ಹಾಗೂ ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷರಾದ ನೌಶಾದ್ ಹಾಜಿ ಉಚಿತವಾಗಿ ನೀಡಿದರು.

      ಕಾರ್ಯಕ್ರಮದಲ್ಲಿ ಶಾಹುಲ್ ಹಮೀದ್ ಹಾಜಿ ಮೆಟ್ರೋ, ಅಬೂಬಕ್ಕರ್ ಮಳಲಿ, ಮುಹಮ್ಮದ್ ಕೊಝಿ, ಹಂಝ ಲತೀಫಿ, ಇಸ್ಮಾಯಿಲ್ ಹಾಜಿ ಡಿಲೆಕ್ಸ್, ಝಕಾರಿಯ ಹಾಜಿ ಅಡ್ಡೂರ್, M.G.ಭಾಷಾ, ರಿಯಾಜ್ ಮಿಲನ್, ಶೇಕಬ್ಬ ಹಾಜಿ ಸೆಲಿನ, ಅಸ್ರಾರುದ್ದೀನ್ ಮಸ್ಜಿದ್ ಇಮಾಮ್ ಇಮ್ತಿಯಾಝ್‌ ರಝ್ವಿ ಹಾಗೂ ವಿದ್ಯಾರ್ಥಿಗಳ ಪೋಷಕರು,SKSSF ಕೈಕಂಬ ವಲಯದ  ನಾಯಕರು  ಬಾಗವಹಿಸಿದ್ದರು.

      ಮದ್ರಸ ಆಡಳಿತ ಸಮಿತಿಯ ಕಾರ್ಯದರ್ಶಿ ಅಹ್ಮದ್ ಹುಸೈನ್ ಸ್ವಾಗತಿದರು. SKSSF ಕೈಕಂಬ ವಲಯ ಕಾರ್ಯದರ್ಶಿ ಆರೀಫ್ ಕಮ್ಮಾಜೆ ಕಾರ್ಯಕ್ರಮ ನಿರ್ವಹಿಸಿದರು

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ