ಕೆಐಸಿಯಲ್ಲಿ ಕೃಷಿಕ ದಿನಾಚರಣೆ

ಕೆಐಸಿಯಲ್ಲಿ ಕೃಷಿಕ ದಿನಾಚರಣೆ

ಕುಂಬ್ರ, ಡಿಸೆಂಬರ್‌ 23 : ಕರ್ನಾಟಕ ಇಸ್ಲಾಮಿಕ್ ಸೆಂಟರ್ ಇದರ ವಿದ್ಯಾರ್ಥಿ ಸಂಘಟನೆಯಾದ ಅಲ್- ಕೌಸರ್ ಸ್ಟೂಡೆಂಟ್ ಅಸೋಸಿಯೇಷನ್ ರಾಷ್ಟ್ರೀಯ ಕೃಷಿಕರ ದಿನವನ್ನು  KIC ಕ್ಯಾಂಪಸ್ ನಲ್ಲಿ ಇಂದು ಆಚರಿಸಿತು. ಕಾರ್ಯಕ್ರಮದ ಅಂಗವಾಗಿ ಪ್ರಸ್ತುತ ಜಾರಿಗೆ ತರಲ್ಪಡುವ 'ಕೃಷಿ ಕಾಯ್ದೆಗಳ' ಬಗ್ಗೆ  ಕೌಸರಿಯ್ಯಾ  ಪದವಿಯ ಅಂತಿಮ  ವರ್ಷದ ವಿದ್ಯಾರ್ಥಿಯಾಗಿರುವ ಶಹೀರ್ ವಿವರಿಸಿದರು. SKSSF ರಾಜ್ಯಾಧ್ಯಕ್ಷರಾದ ಪ್ರೊ ಅನೀಸ್ ಕೌಸರಿ ಮಾತನಾಡಿ  "ರೈತ ದೇಶದ ಬೆನ್ನೆಲುಬು. ಈಗ ಜಾರಿಗೆ ತಂದಿರುವ ಈ ಕೃಷಿ  ಕಾಯಿದೆಗಳ ಹಿಂದೆ ಹಲವು  ಷಡ್ಯಂತ್ರಗಳಿವೆ" ಎಂದು ದೇಶದ ಸಂಧಿಗ್ದ ಸ್ಥಿತಿಯನ್ನು ವಿದ್ಯಾರ್ಥಿಗಳಿಗೆ  ತಿಳಿಸಿಕೊಟ್ಟರು. ಕೃಷಿಯನ್ನು ಸಂರಕ್ಷಿಸುವ ಮತ್ತು ಕೃಷಿಕರಿಗೆ ಬೆಬನ್ನೆಲುಬಾಗಿ ನಿಲ್ಲುವ  ಪ್ರತಿಜ್ಞಾ ಬೋಧನೆಯನ್ನು ಸಂಸ್ಥೆಯ ವಿದ್ಯಾರ್ಥಿ ಝಬೀರ್ ನಡೆಸಿಕೊಟ್ಟರು. ವೇದಿಕೆಯಲ್ಲಿ ಸಂಸ್ಥೆಯ ಉಪಪ್ರಾಂಶುಪಾಲರಾದ ಅಜ್ಮತುಲ್ಲಾಹ್ ಹುದವಿ, ಆರೀಫ್ ಬಾಖವಿ,  ಅಶ್ರಫ್ ವಾಫೀ, ಸತ್ತಾರ್ ಕೌಸರಿ, ಅನಸ್ ವಾಫಿ, ಇಸ್ಮಾಯಿಲ್ ಮದನಿ ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ