ಐಪಿಎಲ್ ಹರಾಜು ಫೆಬ್ರವರಿ 18ಕ್ಕೆ

ಐಪಿಎಲ್ ಹರಾಜು ಫೆಬ್ರವರಿ 18ಕ್ಕೆ

 ನವದೆಹಲಿ. ಜನವರಿ 27:  14ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ಐಪಿಎಲ್‌ನ ಟ್ವಿಟರ್ ಹ್ಯಾಂಡಲ್ ಮೂಲಕ ಪ್ರಕಟಣೆಯಲ್ಲಿ ಬುಧವಾರ ತಿಳಿಸಲಾಗಿದೆ.
      ಚೆನ್ನೈನಲ್ಲಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಎರಡು ಟೆಸ್ಟ್ ಪಂದ್ಯಗಳ ನಂತರ "ಮಿನಿ ಹರಾಜು" ನಡೆಯಲಿದೆ.
      ಸರಣಿಯ ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 5ರಿಂದ 9ರವರಗೆ ನಡೆಯಲಿದ್ದು ಎರಡನೇ ಟೆಸ್ಟ್ ಫೆಬ್ರವರಿ 13ರಿಂದ 17ರವರೆಗೆ ನಡೆಯಲಿದೆ. ಭಾರತದಲ್ಲಿ ಐಪಿಎಲ್ ನಡೆಯುತ್ತದೆಯೇ ಎಂದು ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ. ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ 13ನೇ ಆವೃತ್ತಿಯನ್ನು ಯುಎಇಯಲ್ಲಿ ಸೆಪ್ಟೆಂಬರ್-ನವೆಂಬರ್ ನಲ್ಲಿ ನಡೆಸಲಾಗಿತ್ತು.
      
ಕಿಂಗ್ಸ್ ಇಲೆವೆನ್ ಪಂಜಾಬ್ ಅತಿದೊಡ್ಡ ಮೊತ್ತ(53.20 ಕೋಟಿ ರೂ.)ದೊಂದಿಗೆ ಹರಾಜಿನಲ್ಲಿ ಪ್ರವೇಶಿಸಲಿದ್ದು, ನಂತರದ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (35.90 ಕೋಟಿ ರೂ.) ಮತ್ತು ರಾಜಸ್ಥಾನ್ ರಾಯಲ್ಸ್ (34.85 ಕೋಟಿ ರೂ.) ಇದೆ. ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಹರಾಜಿನಲ್ಲಿ ತಲಾ 10.75 ಕೋಟಿ ರೂ.ನೊಂದಿಗೆ ಅತಿ ಕಡಿಮೆ ಮೊತ್ತ ಹೊಂದಿದೆ. ಒಟ್ಟು 139 ಆಟಗಾರರನ್ನು ಫ್ರಾಂಚೈಸಿಗಳು ಉಳಿಸಿಕೊಂಡಿದ್ದು, 57 ಆಟಗಾರರನ್ನು ಬಿಡುಗಡೆ ಮಾಡಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ