ಏಕಾಂಗಿ ಪ್ರಯಾಣಿಕರಿಗೂ ಮಾಸ್ಕ್‌ ಕಡ್ಡಾಯ: ದೆಹಲಿ ಹೈಕೋರ್ಟ್

ಏಕಾಂಗಿ ಪ್ರಯಾಣಿಕರಿಗೂ ಮಾಸ್ಕ್‌  ಕಡ್ಡಾಯ: ದೆಹಲಿ ಹೈಕೋರ್ಟ್
republicday728
republicday468
republicday234

ನವದೆಹಲಿ: ಖಾಸಗಿ ವಾಹನ ಚಾಲನೆ ಮಾಡುತ್ತಾ, ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೂ ಸಹ ಮಾಸ್ಕ್‌ ಧರಿಸುವುದು ಕಡ್ಡಾಯ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

     ಕೋವಿಡ್‌–19 ಪಿಡುಗು ತೀವ್ರವಾಗಿ ಹರಡುತ್ತಿರುವುದರಿಂದ  ಸುರಕ್ಷತೆ ಅತೀ ಅಗತ್ಯವಾಗಿದೆ. ಮುಖ ಮತ್ತು ಮೂಗನ್ನು ಮುಚ್ಚುವ ರೀತಿಯಲ್ಲಿ ಧರಿಸುವ ಮಾಸ್ಕ್‌ ಸುರಕ್ಷಾ ಕವಚ ಇದ್ದಂತೆ. ಇದರಿಂದ ಕೊರೊನಾ ಸೋಂಕು ಪಸರಿಸದಂತೆ ತಡೆಯಬಹುದು ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌ ಹೇಳಿದರು.

      ಖಾಸಗಿ ವಾಹನದಲ್ಲಿ ಒಬ್ಬರೇ ಪ್ರಯಾಣಿಸುವ ನೆಪವೊಡ್ಡಿ ಮಾಸ್ಕ್‌ ಧರಿಸದೇ ಇರುವುದಕ್ಕೆ ರಿಯಾಯಿತಿ ಇಲ್ಲ. ಮಾಸ್ಕ್‌ ಧರಿಸದೇ ಇರುವ ಏಕಾಂಗಿ ಪ್ರಯಾಣಿಕರಿಗೆ ದಂಡ ವಿಧಿಸುವ ದೆಹಲಿ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸಲು ಅವರು ನಿರಾಕರಿಸಿದರು. ಖಾಸಗಿ ವಾಹನದಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರೂ, ಅದನ್ನು ಸಾರ್ವಜನಿಕ ಸ್ಥಳ ಎಂದೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಸಿಂಗ್‌ ಅಭಿಪ್ರಾಯಪಟ್ಟರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ