ಎಸ್ಕೆಎಸ್‌ಎಸ್‌ಎಫ್ ನಿಂದ ಆಕ್ಸಿಜನ್ ಸಿಲಿಂಡರುಗಳ ವಿತರಣೆ

ಎಸ್ಕೆಎಸ್‌ಎಸ್‌ಎಫ್ ನಿಂದ ಆಕ್ಸಿಜನ್ ಸಿಲಿಂಡರುಗಳ ವಿತರಣೆ

ಮಂಗಳೂರು: ಎಸ್ಕೆಎಸ್‌ಎಸ್‌ಎಫ್ ಯುಎಇ ಸಮಿತಿ ಹುಟ್ಟೂರಿಗೆ ಕಳುಹಿಸಿಕೊಟ್ಟ ಕೋವಿಡ್ ಉಪಕರಣಗಳನ್ನು ಇಂದು ಎಸ್ಕೆಎಸ್‌ಎಸ್‌ಎಫ್ ದ.ಕ.ಜಿಲ್ಲಾ ಸಮಿತಿಗೆ ಯಶಸ್ವಿಯಾಗಿ ಹಸ್ತಾಂತರಿಸಲಾಯಿತು.

      ಕೋವಿಡ್-19ರ ಆರಂಭದಿಂದಲೇ ಎಸ್ಕೆಎಸ್‌ಎಸ್‌ಎಫ್ ವಿಖಾಯ ತಂಡವು ಕೋವಿಡ್ ವಾರಿಯರ್‌ಗಳಾಗಿ ಮುಂಚೂಣಿಯಲ್ಲಿ ನಿಂತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ರೋಗಿಗಳನ್ನು ಆಸ್ಪತ್ರೆಗೆ ರವಾನಿಸುವುದು, ಸಾರ್ವಜನಿಕರಲ್ಲಿ ಧೈರ್ಯ ತುಂಬುವುದು, ಮೃತದೇಹಗಳ ಶವ ಸಂಸ್ಕಾರವನ್ನು ಆಯಾ ಧರ್ಮಗಳಿಗೆ ಅನುಸಾರವಾಗಿ ನೆರವೇರಿಸಿವುದು ಹೀಗೆ ಕೋವಿಡ್ ವಿರುಧ್ದದ ಹೋರಾಟದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.   

      ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳು ತುಂಬಿ ತುಳುಕುತ್ತಿರುವಾಗ, ರೋಗಿಗಳಿಗೆ ವೆಂಟಿಲೇಟರ್ ಲಭಿಸದೆ ತುರ್ತು ಆಮ್ಲ ಜನಕ ಪೂರೈಕೆಯ ಸಮಸ್ಯೆ ಎದುರಾಗಿತ್ತು. ಇಂತಹ ಕ್ಲಿಷ್ಟಕರ ಸಂದರ್ಭವನ್ನು ಮನಗಂಡ ಯುಎಇ ಎಸ್ಕೆಎಸ್‌ಎಸ್‌ಎಫ್ ಹುಟ್ಟೂರ ಜನತೆಯ ನೆರವಿಗೆ ಮುಂದಾಗಿತ್ತು. ಅದರಂತೆ ವಿಖಾಯ ಯುಎಇ ಸಮಿತಿ #Support India's Covid Fight ಎಂಬ ಅಭಿಯಾನವನ್ನು ಆರಂಭಿಸಿ ದಾನಿಗಳಿಂದ ಸಂಗ್ರಹಿಸಿದ ಆಕ್ಸಿಜನ್ ಸಿಲಿಂಡರ್ ಮತ್ತು ಮೆಡಿಕಲ್ ಕಿಟ್ಟ್ ಗಳನ್ನು ಹುಟ್ಟೂರಿಗೆ ಕಳುಹಿಸಿಕೊಡಲಾಗಿತ್ತು.

      ಮಂಗಳೂರು ತಲುಪಿದ ಕೋವಿಡ್ ಫೈಟ್ ಉಪಕರಣಗಳನ್ನು ಇಂದು ನಡೆದ ಸರಳ ಸಮಾರಂಭದಲ್ಲಿ ಎಸ್ಕೆಎಸ್‌ಎಸ್‌ಎಫ್ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳವರಿಗೆ ಯುಎಇ ಸಮಿತಿ ಪ್ರತಿನಿಧಿಗಳು ಹಸ್ತಾಂತರಿಸಿದರು.

      ಎಸ್ಕೆಎಸ್‌ಎಸ್‌ಎಫ್ ವಿಖಾಯ ಕಾರ್ಯವೈಖರಿಯನ್ನು ಮೆಚ್ಚಿ ಹಲವಾರು ದಾನಿಗಳು ಅಗತ್ಯ ಸಹಾಯ ಸಹಕಾರಗಳನ್ನು ಒದಗಿಸಿ ಕೊಟ್ಟಿದ್ದಾರೆ. ಯುಎಇ ಸಮಿತಿಯ ಈ ಒಂದು ಕೊಡುಗೆಯು ಅತ್ಯಂತ ಮಹತ್ವಾದಾಗಿದೆ ಎಂದು ಎಸ್ಕೆಎಸ್‌ಎಸ್‌ಎಫ್ ಕೇಂದ್ರ ಸಮಿತಿ ಕಾರ್ಯದರ್ಶಿ ಕಾಸಿಂ ದಾರಿಮಿ ಹೇಳಿದರು. ಸಮಸ್ತ ಹನೀಫಿ ಸಂಘಟನೆ ವಿಖಾಯಕ್ಕೆ ವಿವಿಧ ಪರಿಕರಗಳನ್ನು ನೀಡಿದ್ದರು. ಕರ್ನಾಟಕ ರಾಜ್ಯ ದಾರಿಮೀಸ್ ಒಕ್ಕೂಟ ಪಿಪಿಇ ಕಿಟ್ ಗಳನ್ನು ಒದಗಿಸಿದ್ದರು. ಇವೆಲ್ಲವನ್ನೂ ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

      ಕೋವಿಡ್ ಫೈಟ್ ಪರಿಕರಗಳ ಹಸ್ತಾಂತರ ಕಾರ್ಯಕ್ರಮದ ನಂತರ ಎಸ್ಕೆಎಸ್‌ಎಸ್‌ಎಫ್ ನಿಂದ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರು ಎಲ್ಲಾ ಆಂಬುಲನ್ಸ್ ಗಳಿಗೆ ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಲಾಯಿತು. ಅದೇ ರೀತಿ ಎಲ್ಲಾ ವಲಯಗಳಿಗೂ  ಆಕ್ಸಿಜನ್ ಸಿಲಿಂಡರ್ ಮತ್ತು ಕೋವಿಡ್ ಪೈಟ್ ಪರಿಕರಗಳನ್ನು ಕಳುಹಿಸಿ ಕೊಡಲಾಯಿತು.

      ಕೋವಿಡ್ ನಿರ್ಬಂಧ ಕಾರಣ ಬೆರಳೆಣಿಕೆಯ ವ್ಯಕ್ತಿಗಳು ಮಾತ್ರ ಭಾಗವಹಿಸಿದ್ದ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯಿದ್ ಅಮೀರ್ ತಂಙಳ್ ಅಲ್-ಬುಖಾರಿ ವಹಿಸಿದ್ದರು. ಸಯ್ಯಿದ್ ಬಾತಿಷಾ ತಂಙಳ್ ಅಲ್ ಬುಖಾರಿ ದುಆ ನೆರವೇರಿಸಿದರು. ಯುಎಇ ಸಮಿತಿ ವರ್ಕಿಂಗ್ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ಸ್ವಾಗತಿಸಿದರು. ಮಿತ್ತಬೈಲು ಉಸ್ತಾದರ ಸುಪುತ್ರ ಇರ್ಷಾದ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು.

      ಎಸ್ಕೆಎಸ್‌ಎಸ್‌ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಕೋಶಾಧಿಕಾರಿ ಹನೀಫ್ ಧೂಮಳಿಕೆ, ವರ್ಕಿಂಗ್ ಕಾರ್ಯದರ್ಶಿ ಆರಿಫ್ ಬಡಕಬೈಲು,  ಯುಎಇ ಸಮಿತಿ ವರ್ಕಿಂಗ್ ಕಾರ್ಯದರ್ಶಿ  ಅಶ್ರಫ್ ಪರ್ಲಡ್ಕ, ಕಾರ್ಯದರ್ಶಿ ಅನ್ವರ್ ಮಾನಿಲ, ಕೋ-ಚೇರ್ಮಾನ್ ಸಫ ಇಸ್ಮಾಯಿಲ್, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯರಾದ ರಷೀದ್ ಹಾಜಿ ಪರ್ಲಡ್ಕ, ಸಮಸ್ತ ಹನೀಫೀಸ್ ನ ಶಂಸುದ್ದೀನ್ ಹನೀಫಿ, ದ.ಕ.ಜಿಲ್ಲಾ ವಿಖಾಯ ಉಸ್ತುವಾರಿ ಇಸ್ಹಾಕ್ ಹಾಜಿ ತೋಡಾರು, ಚೇರ್ಮನ್ ಸಯ್ಯಿದ್ ಇಸ್ಮಾಯಿಲ್ ತಂಙಳ್, ಕನ್ವೀನರ್ ಆಸಿಫ್ ಕಬಕ ಭಾಗವಹಿಸಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ