ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಒಂದು ವಿದ್ಯಾರ್ಥಿನಿಯನ್ನು ಬಿಟ್ಟು ಉಳಿದವರೆಲ್ಲರೂ ಪಾಸ್

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ:  ಒಂದು ವಿದ್ಯಾರ್ಥಿನಿಯನ್ನು ಬಿಟ್ಟು ಉಳಿದವರೆಲ್ಲರೂ ಪಾಸ್

ಬೆಂಗಳೂರು: ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ಮಕ್ಕಳಲ್ಲಿ ಒಬ್ಬಳು ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಉಳಿದಂತೆ ಎಲ್ಲರೂ ಪಾಸಾಗಿದ್ದಾರೆ. ಒಟ್ಟಾರೆ ಫಲಿತಾಂಶ 99.9 ಶೇ. ಎಂದು ಫಲಿತಾಂಶ ಪ್ರಕಟಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

      ಪರೀಕ್ಷೆ ಬರೆದ ಒಟ್ಟು 8,71,443 ವಿದ್ಯಾರ್ಥಿಗಳಲ್ಲಿ 4,70,160 ವಿದ್ಯಾರ್ಥಿಗಳು ಹಾಗೂ 4,01,282 ವಿದ್ಯಾರ್ಥಿನಿಯರೂ ಪಾಸಾಗಿದ್ದಾರೆ. ಏಕೈಕ ವಿದ್ಯಾರ್ಥಿನಿ ಮಾತ್ರ ಅನುತ್ತೀರ್ಣಳಾಗಿದ್ದಾಳೆ.

      125 ವಿಧ್ಯಾರ್ಥಿಗಳು 625 ಅಂಕ ಪಡೆದರೆ,  ಇಬ್ಬರು ವಿದ್ಯಾರ್ಥಿಗಳು 622 ಮತ್ತು  449 ವಿಧ್ಯಾರ್ಥಿಗಳು 621 ಅಂಕಗಳನ್ನು ಪಡೆದಿರುತ್ತಾರೆ.

      25,702 ವಿದ್ಯಾರ್ಥಿಗಳು ಪ್ರಥಮ ಭಾಷೆಯಲ್ಲಿ 125ಕ್ಕೆ 125, ದ್ವಿತೀಯ ಭಾಷೆಯಲ್ಲಿ 36,628, ತೃತೀಯ ಭಾಷೆಯಲ್ಲಿ 36,776 ವಿದ್ಯಾರ್ಥಗಳು, ಗಣಿತದಲ್ಲಿ 6,321 ವಿಜ್ಞಾನದಲ್ಲಿ 3,649, ಸಮಾಜ ವಿಜ್ಞಾನದಲ್ಲಿ 9,367 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

ಫಲಿತಾಂಶಕ್ಕಾಗಿ:http://sslc.karnataka.gov.in/ ಸಂಪರ್ಕಿಸಬಹುದು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ