ಎರಡು ದೋಣಿಗಳ ಪರಸ್ಪರ ಡಿಕ್ಕಿ: ಒಂದು ಸಾವು ,ಇಬ್ಬರ ನಾಪತ್ತೆ

ಎರಡು ದೋಣಿಗಳ ಪರಸ್ಪರ ಡಿಕ್ಕಿ: ಒಂದು ಸಾವು ,ಇಬ್ಬರ ನಾಪತ್ತೆ

ಜೊರ್ಹಾತ್‌: ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಬುಧವಾರ ಎರಡು ದೋಣಿಗಳು ಪರಸ್ಪರ ಡಿಕ್ಕಿ ಹೊಡೆದು, ಒಬ್ಬರು ಮೃತಪಟ್ಟು ಇಬ್ಬರು ನಾಪತ್ತೆಯಾಗಿದ್ದಾರೆ. ಉಳಿದವರನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಸಫಲವಾಗಿದೆ.

      87 ಪ್ರಯಾಣಿಕರ ಸಾಮರ್ಥ್ಯದ ದೋಣಿಯಲ್ಲಿ ಅಪಘಾತ ನಡೆದಾಗ ಸುಮಾರು 120 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆಸ್ಪತ್ರಗೆ ಭೇಟಿ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಘಟನೆಯ ಬಗ್ಗೆ ಕ್ರಿಮಿನಲ್‌ ಮೊಖದ್ದಮೆ ದಾಖಲಿಸಿ, ಉನ್ನತ ಮಟ್ಟದ ತನಿಕೆ ನಡೆಸುವಂತೆ ಆದೇಶಿಸಿದ್ದಾರೆ.

      ಡಿಕ್ಕಿ ಸಂಭವಿಸಿ ದೋಣಿ ಮುಳುಗುತ್ತಿರುವಾಗ ಜನ ಆತಂಕದಿಂದ, ಚೀರಾಡುತ್ತಾ ನದಿಗೆ ಹಾರಿರುವ ವೀಡಿಯೊಗಳು ಸದ್ಯ ಸಾಮಾಜಿಕ ಜಾಲತಾಣವನ್ನು ತಲ್ಲಣಗೊಳಿಸಿದೆ. ಬಿರುಕು ಬಿಟ್ಟು ಹೊಡೆದುಹೋಗುವ ದೋಣಿ ನೀರಿನಲ್ಲಿ ಮುಳುಗುವುದು, ಪ್ರಯಾಣಿಕರು ಕಿರುಚುತ್ತಾ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವುದು, ಮುಳುಗುತ್ತಿರುವ ದೋಣಿಯಿಂದ ಜಿಗಿಯುವುದು ದೃಶ್ಯದಲ್ಲಿದೆ.

ವೀಡಿಯೋ ನೋಡಲು ಕ್ಲಿಕ್‌ ಮಾಡಿ:

https://youtu.be/i6kkgUIOPjA

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ