ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಫಿರೋಝ್ ಮಲಾರ್ - ಡಿಕೆಶಿಯಿಂದ ಸನ್ಮಾನ

ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ  ಫಿರೋಝ್ ಮಲಾರ್ - ಡಿಕೆಶಿಯಿಂದ ಸನ್ಮಾನ
republicday728
republicday468
republicday234

ಉಳ್ಳಾಲ: ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಾವೂರು ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಫಿರೋಝ್ ಮಲಾರ್  ಅವಿರೋಧವಾಗಿ ಆಯ್ಕೆಯಾದರು. ಸಂಘಟನಾ ಕಾರ್ಯದಲ್ಲಿ ಸದಾ ಮುಂಚೂಣಿಯಲ್ಲಿರುವ ಫಿರೋಝ್ ಚತುರ ಭಾಷಣಗಾರನು ಹೌದು. ಕಳೆದ ಅವಧಿಯಲ್ಲಿ ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.. ದಕ್ಷ ಆಡಳಿತ ನಡೆಸಿ ಜನರ ಪ್ರಿತಿಗೆ ಪಾತ್ರರಾದ ಇವರು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ಮೋನು ಅವರ ಸುಪುತ್ರರಾಗಿದ್ದಾರೆ . ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಸರ್ವ ಧರ್ಮದ ಜನರಲ್ಲಿ ಯುವ ನಾಯಕನಾಗಿ ಆಶಾಭಾವನೆಯನ್ನು ಮೂಡಿಸಿದ್ದಾರೆ.

     ಅವಿರೋಧವಾಗಿ ಆಯ್ಕೆಯಾದ ಫಿರೋಝ್‌ ರವರನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಶಾಲು ಹೊದಿಸಿ ಸನ್ಮಾನಿಸಿದರು. ಡಿ.ಸಿ.ಸಿ. ಅಧ್ಯಕ್ಷರಾದ ಹರೀಶ್‌ ಕುಮಾರ್‌, ಶಾಸಕರಾದ ಯು.ಟಿ.ಖಾದರ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ, ಕೋಡಿಚಾಲ್‌ ಇಬ್ರಾಹಿಂ, ಕನಚೂರು ಮೋನು, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಸಂತೋಷ್‌ ಕುಮಾರ್‌ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ