ಉಪ್ಪಿನಂಗಡಿ: ಯು.ಟಿ. ತೌಸಿಫ್‌ ಗೆಲುವು

ಉಪ್ಪಿನಂಗಡಿ: ಯು.ಟಿ. ತೌಸಿಫ್‌ ಗೆಲುವು
republicday728
republicday468
republicday234

ಉಪ್ಪಿನಂಗಡಿ: ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಒಂದನೇ ವಾರ್ಡ್ ನಲ್ಲಿ‌ ಮಹಮ್ಮದ್ ತೌಸೀಫ್ ಸತತ ಮೂರು ನೇ ಬಾರಿಗೆ ಜಯಗಳಿಸಿದ್ದಾರೆ. 

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಮಹಮ್ಮದ್ ತೌಸೀಫ್ ಮೂರನೇ ಬಾರಿಯೂ ತನ್ನ ಸ್ಥನವನ್ನು ಉಳಿಸಿಕೊಂಡು ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ  ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು, ನಂತರ ಯೂತ್ ಕಾಂಗ್ರೆಸ್ ನಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದರು. ಈ ಬಾರಿ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಗರಾಜ್ ವಿರುದ್ಧ 287 ಮತಗಳ ಅಂತರದಿಂದ  ವಿಜಯ ಗಳಿಸಿದ್ದಾರೆ. ಯು.ಟಿ. ಮುಹಮ್ಮದ್‌ ತೌಸಿಫ್  ಒಟ್ಟು 487 ಮತವನ್ನು  ಪಡೆದಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ