ಉಪ್ಪಿನಂಗಡಿ ಬಸ್‌ ನಿಲ್ದಾಣದಲ್ಲಿ ತಾಯಿ ಮಗಳ ಮೇಲೆ ಹರಿದ ಬಸ್:‌ ಸ್ಥಳದಲ್ಲೇ ಮರಣ, ದಿಢೀರ್‌ ಪ್ರತಿಭಟನೆ

ಉಪ್ಪಿನಂಗಡಿ ಬಸ್‌ ನಿಲ್ದಾಣದಲ್ಲಿ ತಾಯಿ ಮಗಳ ಮೇಲೆ ಹರಿದ ಬಸ್:‌ ಸ್ಥಳದಲ್ಲೇ ಮರಣ, ದಿಢೀರ್‌ ಪ್ರತಿಭಟನೆ

ಉಪ್ಪಿನಂಗಡಿ: ಚಾಲಕನ ಅಜಾಗರೂಕತೆಯಿಂದಾಗಿ ಉಪ್ಪಿನಂಗಡಿ ಬಸ್ಸು ನಿಲ್ದಾಣದಲ್ಲಿ ತಾಯಿ ಹಾಗೂ ಒಂದೂವರೆ ವರ್ಷದ ಮಗು ಬಲಿಯಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

      ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯವರಾದ ಹಸೀನಾಬಾನು (27)  ತನ್ನ ಒಂದೂವರೆ ವರ್ಷದ ಮಗುವಿನೊಂದಿಗೆ ವೈದ್ಯರನ್ನು ಭೇಟಿಯಾಗಲು ಉಪ್ಪಿನಂಗಡಿಗೆ ಬಂದಿದ್ದರು. ವೈದ್ಯರಿಂದ ಔಷಧಿಯನ್ನು ಪಡೆದು ಮರಳಿ ಮನೆಗೆ ಹೋಗಲೆಂದು  ಉಪ್ಪಿನಂಗಡ ಬಸ್ ನಿಲ್ದಾಣದಲ್ಲಿ ಬಸ್ಸಿನ ಕಡೆಗೆ ಹೋಗುತ್ತಿದ್ದಾಗ ಬಸ್‌ ನಿಲ್ದಾಣಕ್ಕೆ ಪ್ರವೇಶಿಸಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಮಹಿಳೆಯ ಮೇಲೆ ಚಲಿಸಿತು. ಮಹಿಳೆ ಹಸೀನಾ ಬಾನು ಹಾಗೂ ಆಕೆಯ ಕೈಯ್ಯಲ್ಲಿದ್ದ ಪುಟ್ಟ ಮಗು ಒಂದುವರೆ ವರ್ಷದ ಮುಹಮ್ಮದ್‌ ಶಾಹಿಲ್‌ ಸ್ಥಳದಲ್ಲೇ ಮೃತಪಟ್ಟರು.

      ಆಕ್ರೋಶಗೊಂಡ ಸ್ಥಳೀಯರು ಚಾಲಕನ ಅಜಾಗರಕತೆಗಾಗಿ ಸ್ಥಳದಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿದರು. ಬಸ್ ಗಳ ನಡುವಿನ ಪೈಪೋಟಿಯಿಂದ ಇಂತಹ ಘಟನೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಯಾವುದೇ ಬಸ್ ಬಸ್ ನಿಲ್ದಾಣದೊಳಗೆ ಪ್ರವೇಶಿಸಬಾರದು ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಂದ ಉಪ್ಪಿನಂಗಡಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

      ಮೃತದೇಹಗಳನ್ನು ಪೋರ್ಸ್ಟ್‌ಮಾರ್ಟಂಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.

ವೀಡಿಯೋ ನೋಡಿ:

https://nandanatimes.com/uploads/videos/2021/10/uppinangadi.mp4

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ