ಉದ್ದ ನಾಲಿಗೆ: ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ ತಮಿಳುನಾಡಿನ ಯುವಕ

ಬೆಂಗಳೂರು: ಸಾಧಾರಣವಾಗಿ ಹೆಚ್ಚು ಮಾತಾಡುವವರನ್ನು ಉದ್ದ ನಾಲಿಗೆಯವರು ಎಂದು ಕರೆಯುವುದಿದೆ. ಕೆಲವರು ಪ್ರಕೃತಿದತ್ತವಾಗಿ ಉದ್ದ ನಾಲಿಗೆಯವರನ್ನು ಹೊಂದಿರುತ್ತಾರೆ. ಅಂತಹ ವರ್ಗಕ್ಕೆ ಸೇರಿದವರಲ್ಲಿ ತಮಿಳುನಾಡಿನ ಯುವಕ ಕೆ. ಪ್ರವೀಣ್ ಎಂಬವರು ಅತ್ಯಂತ ಉದ್ದದ ನಾಲಿಗೆ ಹೊಂದಿರುವ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಇವರು ಅತ್ಯಂತ ಉದ್ದದ ನಾಲಿಗೆ ಕಾರಣಕ್ಕಾಗಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿದ್ದಾರೆ.
ವಿರುತ್ನಗರ್ ಜಿಲ್ಲೆಯ ತಿರುತಂಗಳ್ನ ನಿವಾಸಿ ಪ್ರವೀಣ್ (20), 10.8 ಸೆ.ಮಿ. ಉದ್ದದ ನಾಲಿಗೆ ಹೊಂದಿದ್ದು, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆಗೆ ಸೇರಿದ್ದಾರೆ. ಮುಂದೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಕೂಡ ಸ್ಥಾನ ಪಡೆಯುವ ಅಭಿಲಾಷೆ ಹೊಂದಿದ್ದಾರೆ ಪ್ರವೀಣ್.
ಸಾಮಾನ್ಯವಾಗಿ ಪುರುಷರ ನಾಲಿಗೆ ಸುಮಾರು 8.5 ಸೆ.ಮಿ ವರೆಗೆ ಉದ್ದ ಬೆಳೆಯುತ್ತದೆ. ಉದ್ದದ ನಾಲಿಗೆ ಹೊಂದಿರುವ ಪ್ರವೀಣ್ ತನ್ನ ನಾಲಿಗೆಯಿಂದಲೇ ದಾಖಲೆ ಮಾಡಿದ್ದು, ನಾಲಿಗೆ ಮೂಲಕವೇ ಪೇಟಿಂಗ್ ಕೂಡ ಮಾಡುವ ಕಲೆ ಸಿದ್ಧಿಸಿಕೊಂಡಿದ್ದಾರೆ.
ಪ್ರವೀಣ್, ರೊಬಾಟಿಕ್ಸ್ ಎಂಜಿನಿಯರಿಂಗ್ ಪದವಿ ಅಧ್ಯಯನ ಮಾಡುತ್ತಿದ್ದಾರೆ. ದಾಖಲೆಯ ಉದ್ದದ ನಾಲಿಗೆಯಿಂದಾಗಿ ಸಾಮಾಜಿಕ ತಾಣಗಳಲ್ಲಿ ಕೂಡ ವೈರಲ್ ಆಗಿದ್ದಾರೆ.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ