ಉತ್ತರಪ್ರದೇಶ ಹೆಸರುಗಳ ಕೇಸರೀಕರಣ: ಫೈಝಾಬಾದ್‌ ರೈಲು ನಿಲ್ದಾಣ ಇನ್ನು ಮುಂದೆ ಅಯೋಧ್ಯಾ ಕೇಂಟ್

ಉತ್ತರಪ್ರದೇಶ ಹೆಸರುಗಳ ಕೇಸರೀಕರಣ:  ಫೈಝಾಬಾದ್‌ ರೈಲು ನಿಲ್ದಾಣ ಇನ್ನು ಮುಂದೆ ಅಯೋಧ್ಯಾ ಕೇಂಟ್

ಉತ್ತರಪ್ರದೇಶ: ಉತ್ತರಪ್ರದೇಶದ ಫೈಝಾಬಾದ್‌ ರೈಲು ನಿಲ್ದಾಣವನ್ನು ಅಯೋಧ್ಯಾ ಕೇಂಟ್‌ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಿಸಿದ್ದಾರೆ.

      ಉತ್ತರಪ್ರದೇಶ ಮುಖ್ಯಮಂತ್ರಿ ಕಚೇರಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು, ಕೇಂದ್ರದಿಂದ ಅನುಮೋದನೆ ಪಡೆದ ನಂತರ ಅಧಿಕೃತ ಬದಲಾವಣೆಗೆ ಅಧಿಸೂಚನೆಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಸಿಎಂ ಕಛೇರಿ ತಿಳಿಸಿದೆ.

      ನವೆಂಬರ್ 2018 ರಲ್ಲಿ, ಸಿಎಂ ಆದಿತ್ಯನಾಥ್ ಸರಕಾರ ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಘೋಷಿಸಿತ್ತು. ಅಲಹಾಬಾದ್ ಹೆಸರನ್ನು ಪ್ರಯಾಗ್‌ ರಾಜ್ ಮತ್ತು ಮೊಘಲ್ಸರಾಯ್ ರೈಲ್ವೆ ಜಂಕ್ಷನ್ ಹೆಸರನ್ನು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಬದಲಾಯಿಸಿತ್ತು.

      ಅಲಿಗರ್ ಜಿಲ್ಲಾ ಪಂಚಾಯತ್ ಕೂಡ ಈ ಹಿಂದೆ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಕಳುಹಿಸಿ, ನಗರದ ಹೆಸರನ್ನು 'ಹರಿಘರ್' ಎಂದು ಬದಲಾಯಿಸುವಂತೆ ಕೋರಿತ್ತು.

      ಫಿರೋಜಾಬಾದ್ ಜಿಲ್ಲೆಯ ಹೆಸರನ್ನು ಚಂದ್ರ ನಗರ ಎಂದು ಬದಲಿಸುವ ಇನ್ನೊಂದು ಪ್ರಸ್ತಾಪವೂ ಚಲಾವಣೆಯಲ್ಲಿದೆ.

      1874ರಲ್ಲಿ ಸ್ಥಾಪನೆಗೊಂಡ, ಸುಮಾರು 147 ವರ್ಷಗಳ ಇತಿಹಾಸ ಇರುವ ಈ ರೈಲವೇ ಜಂಕ್ಷನ್‌ ಹಲವಾರು ಪ್ರಮುಖ ನಗರಗಳ ಸಂಪರ್ಕ ಕೊಂಡಿಯಾಗಿದೆ. ಕೇಸರೀಕರಣಕ್ಕೆ ಬಲಿಯಾಗುತ್ತಿರುವ ಉತ್ತರಪ್ರದೇಶದ ಕೆಲವು ಪ್ರಮುಖ ಹೆಸರುಗಳ ಸಾಲಿಗೆ ಫೈಝಾಬಾದ್‌ ಕೂಡಾ ಸೇರಕೊಳ್ಳುತ್ತಿದೆ. ಫೈಝಾಬಾದ್‌ ಇನ್ನು ನೆನಪು ಮಾತ್ರವಾಗಿ ಉಳಿಯಳಿದೆ.

‌   

     

 

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ