ಉಡುಪಿ: ಮೊಬೈಲ್ಗೆ ಲಿಂಕ್ ಕಳುಹಿಸಿ ಸಾವಿರಾರು ರೂ. ವಂಚನೆ

ಉಡುಪಿ: ಮೊಬೈಲ್ಗೆ ಲಿಂಕ್ ಕಳುಹಿಸಿ ಸಾವಿರಾರು ರೂ. ವಂಚನೆ

ಉಡುಪಿ: ವ್ಯಕ್ತಿಯೋರ್ವರಿಗೆ ಆನ್‌ಲೈನ್‌ ಮೂಲಕ 99,999 ರೂ. ವಂಚಿಸಿದ ಘಟನೆ ನಡೆದಿದೆ.

      ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವ ಹರೀಶ್‌ ಎಸ್‌. ಅವರು ಉಡುಪಿಯ ಎಸ್‌.ಬಿ.ಐ. ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು

      ಅವರ ಇಲಾಖೆಯ ಕೆ.ಜಿ.ಐ.ಡಿ. ಹಣ ಬ್ಯಾಂಕ್‌ಗೆ ಜಮೆಗೊಂಡಿರುವುದನ್ನು ಗಮನಿಸಿದ ಅಪರಿಚಿತ ವ್ಯಕ್ತಿಗಳು ಫೆ. 11ರಂದು ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿ ಬ್ಯಾಂಕ್‌ ವಿವರ ಪಡೆದು ಖಾತೆಯಿಂದ 1,499 ರೂ., 98,500 ರೂ.ಸಹಿತ ಒಟ್ಟು 99,999 ರೂ.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡಿದ್ದಾರೆ.

      ಈ ಮೂಲಕ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ