ಇಸ್ಲಾಂ ಧರ್ಮ ತೊರೆದ ಖ್ಯಾತ ಮಲೆಯಾಳಂ ನಿರ್ದೇಶಕ: ಅಲಿ ಅಕ್ಬರ್ ಇನ್ನು ರಾಮಸಿಂಹ

ಇಸ್ಲಾಂ ಧರ್ಮ ತೊರೆದ ಖ್ಯಾತ ಮಲೆಯಾಳಂ ನಿರ್ದೇಶಕ:  ಅಲಿ ಅಕ್ಬರ್ ಇನ್ನು ರಾಮಸಿಂಹ

ತಿರುವಣತಪುರಂ: ಮಲೆಯಾಳಂ ನಿರ್ದೇಶಕ ಅಲಿ ಅಕ್ಬರ್ ಅವರು ಇತ್ತೀಚೆಗೆ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಸಂತಸವನ್ನು ಆಚರಿಸಿದವರ ವಿರುದ್ಧ ಪ್ರತಿಭಟನೆಗಾಗಿ ಇಸ್ಲಾಂ ಧರ್ಮವನ್ನು ತೊರೆಯುವುದಾಗಿ ಘೋಷಿಸಿದ್ದಾರೆ.

      ಅಲಿ ಅಕ್ಬರ್‌ ಅವರು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿರುವುದಾಗಿಯೂ ತನ್ನ ಹೆಸರನ್ನು ರಾಮಸಿಂಹ ಎಂದು ಬಾದಲಾಯಿಸಿರುವುದಾಗಿ ಘೋಷಿಸಿದ್ದಾರೆ.

      ಸಿಡಿಎಸ್ ಬಿಪಿನ್ ರಾವತ್ ಅವರ ದುರ್ಮರಣಕ್ಕೆ ಕೆಲವರು ಸಂತಸ, ನಗುವಿನ ಎಮೋಜಿ ಹಾಕಿ ಸಂಭ್ರಮಿಸಿದ್ದಾರೆ. ಆದರೆ ಯಾರೊಬ್ಬ ಮುಸ್ಲಿಂ ನಾಯಕನೂ ಇದನ್ನು ಖಂಡಿಸಿಲ್ಲ. ಇದರ ಪ್ರತಿಭಟನಾರ್ಥವಾಗಿ ತಾನು ಇಸ್ಲಾಂ ಧರ್ಮ ತೊರೆಯುವುದಾಗಿ ತಿಳಿಸಿದ್ದಾರೆ.

      ಅಲಿ ಅಕ್ಬರ್‌ ಅವರು ರಾಜಕೀಯವಾಗಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು, ಉತ್ತಮ ನಿರ್ದೇಶನಕ್ಕಾಗಿ ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದರು.

      ಇತ್ತೀಚೆಗಷ್ಟೇ  ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅವರು ಇಸ್ಲಾಮ್ ತೊರೆದು ಹಿಂದೂ ಧರ್ಮಾನುಯಾಗಿ ಪರ್ವರ್ತನೆಗೊಂಡಿದ್ದರು. ಈಗ ಅದೇ ಹಾದಿಯಲ್ಲಿ ಮಲೆಯಾಳಂ ನಿರ್ದೇಶಕ ಅಲಿ ಅಕ್ಬರ್ ಸಾಗಿದ್ದಾರೆ.

      ಅಲಿ ಅವರಿಗೆ ಹಲವಾರು ಮುಸ್ಲಿಮರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಇತ್ತೀಚೀನ ಮಾಹಿತಿಯ ಪ್ರಕಾರ ಆ ವಿಡಿಯೋ ಸಾಮಾಜಿಕ ಜಾಲತಾಣದಿಂದ ಕಾಣೆಯಾಗಿದೆ ಆದರೆ ವಾಟ್ಸ್ ಆಪ್ ಗಳಲ್ಲಿ ವೈರಲ್ ಆಗತೊಡಗಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ