ಇಂದಿರಾ ಕ್ಯಾಟೀನ್ ಗೆ ಸಿಗದ ಅನುದಾನ: ಪ್ರತಿಭಟನೆ

ಇಂದಿರಾ ಕ್ಯಾಟೀನ್ ಗೆ ಸಿಗದ ಅನುದಾನ: ಪ್ರತಿಭಟನೆ

ಬೆಂಗಳೂರು: ಬಿಜೆಪಿ ಸರಕಾರವು ಇಂದಿರಾ ಕ್ಯಾಂಟೀನ್ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಹಾಗೂ ಇಂದಿರಾ ಕ್ಯಾಂಟೀನ್ ಮುಚ್ಚಲು ನಡೆಸುತ್ತಿರುವ ಹುನ್ನಾರದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಮಿಕ ವಿಭಾಗದ ವತಿಯಿಂದ ಬಿಬಿಎಂಪಿ ಕೇಂದ್ರ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
     2017ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಕಾಂಗ್ರೆಸ್ ಸರ್ಕಾರವು ಬಡವರು, ಕೂಲಿಕಾರ್ಮಿಕರು ಹಸಿವಿನಿಂದ ಬಳಲಬಾರದು ಎಂದು 5ರೂಪಾಯಿಗೆ ಉಪಹಾರ ಮತ್ತು 10ರೂಪಾಯಿಗಳಿಗೆ ಊಟವನ್ನು ಇಂದಿರಾ ಕ್ಯಾಂಟೀನ್ ಮೂಲಕ ವಿತರಿಸುತ್ತಿದ್ದರು. ಲಕ್ಷಾಂತರ ಜನ ಪ್ರತಿದಿನ ಊಟ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವು ಇಂದಿರಾ ಕ್ಯಾಂಟೀನ್ ಗೆ ಅನುದಾನ ನೀಡದೆ ಅದನ್ನು ಮುಚ್ಚುವ ಕುತಂತ್ರ ಮಾಡುತ್ತಿದೆ. ಇದು ಕೊರೋನ ಹೆಸರಿನಲ್ಲಿ ಲಾಕ್ ಡೌನ್, ಆಹಾರ ಕಿಟ್ ಮತ್ತು ಹೆಲ್ತ್ ಕಿಟ್, ಸ್ಯಾನಿಟೈಸರ್, ಸೀಲ್ ಡೌನ್ ಹಗರಣದ ಸರ್ಕಾರವಾಗಿದೆ .ಇದೀಗ ಬಡವರು ತಿನ್ನುವ ಒಂದು ಹೊತ್ತಿನ ಊಟಕ್ಕೂ ಕಲ್ಲು ಹಾಕುವ ತಂತ್ರ ಮಾಡುತ್ತಿದೆ. ಬಿಜೆಪಿ ಸರ್ಕಾರದ ವಿರುದ್ದ ಬೆಂಗಳೂರಿನ 198 ವಾರ್ಡುಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು ಹೇಳಿದರು.
     ಕೆಪಿಸಿಸಿ ಕಾರ್ಮಿಕ ಘಟಕ ಅಧ್ಯಕ್ಷರಾದ ಪುಟ್ಟಸ್ವಾಮಿಗೌಡರು ಮಾತನಾಡಿ ಶಾಲಾ-ಕಾಲೇಜು ಮತ್ತು ಬಡವರು, ಕೂಲಿ ಕಾರ್ಮಿಕರು,  ಆಟೋ ಚಾಲಕರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಕಡಿಮೆ ವೆಚ್ಚದಲ್ಲಿ ಸಿಗುವ ಉಪಹಾರ ಮತ್ತು ಊಟದಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು. ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
     ಪ್ರತಿಭಟನೆ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರಾದ ರಂದೀಪ್ ರವರಿಗೆ ಈ ಕುರಿತು ಮನವಿ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ಪ ಮತ್ತು ಕಾರ್ಯದರ್ಶಿಗಳಾದ ದಿನೇಶ್, ನಾಗರಾಜ್ ಮತ್ತು ನೂರಾರು ಕಾರ್ಮಿಕ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ