ಆಹಾರ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ ಹನೀಫ್ ಸಾಹೇಬ್

ಆಹಾರ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿ ಹನೀಫ್ ಸಾಹೇಬ್

ಮಂಗಳೂರು: ಆಹಾರ ಕ್ಷೇತ್ರದಲ್ಲಿ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಗಳೂರು ಆಹಾರ ಸಂರಕ್ಷಣಾ ಸಮಿತಿಯ ೨೦೨೧ನೇ ಸಾಲಿಗೆÀ ನೂತನ ಅಧ್ಯಕ್ಷರಾಗಿ ಮಾನವ ಹಕ್ಕು ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳ ಹಾಗೂ ಪ್ರಧಾನ ಕಾರ್ಯದರ್ಶಿ ಯಾಗಿ ಬಶೀರ್ ಹೊಕ್ಕಾಡಿ ಆಯ್ಕೆಯಾಗಿದ್ದಾರೆ.

      ಡಿ.ಸಿ ಕಚೇರಿ ಬಳಿಯ ಫ್ಯಾಮಿಲ್ಟನ್ ಕಚೇರಿಯಲ್ಲಿ ನಡೆದ ಮಹಾಸಭೆಯಲಿ ್ಲ ಈ ಆಯ್ಕೆಯನ್ನು ಮಾಡಲಾಗಿದೆ. ಹನೀಫ್ ಪಾಜಪಳ್ಳ ಇವರು ಹಲವು ವರ್ಷದಿಂದ ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಸೇವೆಯನ್ನು ಪರಿಗಣಿಸಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯು ತಿಳಿಸಿರುತ್ತದೆ.

      ಹನೀಫ್ ಸಾಹೇಬ್ ಇವರು ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಪಾಜಪಳ್ಳ ನಿವಾಸಿಯಾಗಿದ್ದು ಸದ್ಯ ಮಂಗಳೂರಿನಲ್ಲಿ ನೆಲೆಸಿರುವ ಇವರು ಹಲವು ವಿಧಗಳಿಂದ  ಸಮಾಜಸೇವೆಯಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

      ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಅಡ್ವಕೇಟ್ ಹನೀಫ್ ಮಂಗಳೂರು, ಅಡ್ವಕೇಟ್ ನವೀನ್, ಡಾಕ್ಟರ್ ರಿಯಾಝ್ ಮಂಗಳೂರು, ರಾಕೇಶ್ ಜಪ್ಪು, ಬಶೀರ್ ಮಂಗಳೂರು, ಯೋಗಿಶ್ ಬಲ್ಮಠ, ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ