ಆರ್‌ಎಸ್‌ಎಸ್ ಅನ್ನು 'ಸಂಘ ಪರಿವಾರ್' ಎಂದು ನಾನು ಕರೆಯುವುದಿಲ್ಲ:ರಾಹುಲ್ ಗಾಂಧಿ

ಆರ್‌ಎಸ್‌ಎಸ್ ಅನ್ನು 'ಸಂಘ ಪರಿವಾರ್' ಎಂದು ನಾನು ಕರೆಯುವುದಿಲ್ಲ:ರಾಹುಲ್ ಗಾಂಧಿ
republicday728
republicday468
republicday234

ನವದೆಹಲಿ, ಮಾರ್ಚ್ 25:  "ಆರ್‌ಎಸ್‌ಎಸ್‌ ಅನ್ನು ಇನ್ನು ಮುಂದೆ ಸಂಘ ಪರಿವಾರ ಎಂದು ಕರೆಯುವುದಿಲ್ಲ. ಮಹಿಳೆಯರನ್ನು ಹಾಗೂ ಹಿರಿಯರನ್ನು ಸಂಘ ಪರಿವಾರದಲ್ಲಿ ಗೌರವಿಸುತ್ತಾರೆ. ಆದರೆ ಆರ್‌ಎಸ್‌ಎಸ್‌ನಲ್ಲಿ ಹೀಗಾಗುತ್ತಿದೆಯೇ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

   ಆರ್‌ಎಸ್‌ಎಸ್‌ ವಿರುದ್ಧ ಟ್ವೀಟ್ ಮಾಡಿರುವ ಅವರು, "ಆರ್‌ಎಸ್‌ಎಸ್‌ ಹಾಗೂ ಅದರ ಸಂಘ ಸಂಸ್ಥೆಗಳನ್ನು ನಾನು ಸಂಘ ಪರಿವಾರ ಎಂದು ಕರೆಯುವುದಿಲ್ಲ. ಅದಕ್ಕೆ ಆರ್‌ಎಸ್‌ಎಸ್‌ ಸೂಕ್ತವೂ ಅಲ್ಲ. ಕುಟುಂಬದಲ್ಲಿ ಮಹಿಳೆ, ಹಿರಿಯರನ್ನು ಗೌರವದಿಂದ ಕಾಣಲಾಗುತ್ತದೆ. ಪ್ರೀತಿ, ಗೌರವಾದರಗಳು ತುಂಬಿರುತ್ತವೆ. ಆದರೆ ಆರ್‌ಎಸ್‌ಎಸ್‌ನಲ್ಲಿ ಅದು ಕಾಣಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

  ಉತ್ತರ ಪ್ರದೇಶದಲ್ಲಿ ಕೇರಳ ಕ್ರೈಸ್ತ ಸನ್ಯಾಸಿನಿಗಳ ಮೇಲಿನ ದೌರ್ಜನ್ಯದ ಕುರಿತು ಪ್ರತಿಕ್ರಿಯಿಸಿರುವ ಅವರು, ಇವೆಲ್ಲವೂ ಆರ್‌ಎಸ್‌ಎಸ್‌ನ ಕೆಟ್ಟ ಪ್ರಚಾರದ ಫಲ ಎಂದು ಹೇಳಿದ್ದಾರೆ.
"ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವುದು, ಅಲ್ಪಸಂಖ್ಯಾತರನ್ನು ಹಿಂಸೆ ಮಾಡುವುದು ಈ ಸಂಘ ಪರಿವಾರದ ಕೆಲಸ. ಇಂಥ ಕೆಟ್ಟ ಶಕ್ತಿಗಳ ವಿರುದ್ಧ ಸರಿಯಾದ ಹೆಜ್ಜೆ ಇಡಲು ಸೂಕ್ತ ಸಮಯ" ಎಂದು ಹೇಳಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ