ಆಯಿಷಾ ಇಬ್ರಾಹಿಂ ಜುಮಾ ಮಸ್ಜಿದ್ ಕೆ.ಸಿ. ರೋಡ್: 3 ದಿನಗಳ ಇಶಲ್ ಮಿಲಾದ್ ಫೆಸ್ಟ್-2024 ಸಮಾರೋಪ

ಕಲ್ಲಡ್ಕ: ಆಯಿಷಾ ಇಬ್ರಾಹಿಂ ಜುಮಾ ಮಸ್ಜಿದ್ ಕೆ.ಸಿ.ರೋಡ್ ಇದರ ಅಧೀನದಲ್ಲಿ ಲೋಕ ಪ್ರವಾದಿ ಮಹಮ್ಮದ್ ಮುಸ್ತಫ (ಸ.ಅ.) ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ ಇಶಲ್ ಮಿಲಾದ್ ಫೆಸ್ಟ್ ಕಾರ್ಯಕ್ರಮವು ಅದ್ದೂರಿಯಾಗಿ ಸಮಾಪ್ತಿಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಾರಂಭದ ಕೇಂದ್ರ ಬಿಂದು ಸಯ್ಯದ್ ಕುಟುಂಬದ ಕಣ್ಮಣಿ ಬಹುಮಾನ್ಯರಾದ ಅಸ್ಸಯ್ಯದ್ ಇಬ್ರಾಹಿಂ ಬಾತಿಷ ತಂಙಳ್ ಆನೆಕಲ್ರವರ ಸಮಕ್ಷಮದಲ್ಲಿ MJM ಕಲ್ಲಡ್ಕ ಇದರ ನೂತನ ಅಧ್ಯಕ್ಷರಾದ ಅಬ್ದುಲ್ಲಾ ಕೋಡಿ ವಹಿಸಿಕೊಂಡಿದ್ದರು.
ಕೆ.ಸಿ. ರೋಡ್ ಜುಮ್ಮಾ ಮಸ್ಜಿದ್ ಖತೀಬರಾದ ಯಾಹ್ಯಾ ದಾರಿಮಿ, ಕಲ್ಲಡ್ಕ ಖತೀಬ್ ಬಹುಮಾನ್ಯರಾದ ಉಸ್ಮಾನ್ ದಾರಿಮಿ, ಬಹುಮಾನ್ಯರಾದ ಉಸ್ತಾದ್ ಅಬ್ದುಲ್ ಹಮೀದ್ ದಾರಿಮಿ ಖತೀಬರು ಗೋಳ್ತಮಜಲ್ ಇಶಲ್ ಮೀಲಾದ್ನ ಸಂದೇಶಗಳನ್ನು ನೀಡಿದರು.
ನೂರುಲ್ ಉಲೂಮ್ ಮದ್ರಸ ಕೆ.ಸಿ.ರೋಡ್ ವಿದ್ಯಾರ್ಥಿ, ವಿದ್ಯಾರ್ಥಿನಿಗಳಿಗಾಗಿ ಪ್ರತಿಭಾ ಪ್ರದರ್ಶನ ಹಾಗೂ ವಿವಿಧ ಧಾರ್ಮಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಆಯಿಷಾ ಜುಮಾ ಮಸ್ಜಿದ್ ಕೆ.ಸಿ.ರೋಡ್ ಇದರ ಅಧ್ಯಕ್ಷರಾದ ಎಫ್.ಕೆ.ಖಾದರ್ ಇವರ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸ್ಥಳೀಯ ಖತೀಬ್ ಉಸ್ತಾದ್ ಯಾಹ್ಯಾ ದಾರಿಮಿ ದುವಾ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನೂರುಲ್ ಉಲೂಮ್ ಮದ್ರಸ ವಿದ್ಯಾರ್ಥಿಗಳ ಬುರ್ದಾ ಮಜ್ಲಿಸ್, ದಫ್ ಪ್ರದರ್ಶನ ಗಮನ ಸೆಳೆಯುವಂತಾಗಿತ್ತು. ಪುಟಾಣಿ ಮಕ್ಕಳ ದಫ್ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.
ವೇದಿಕೆಯಲ್ಲಿ MJM ಕಾರ್ಯದರ್ಶಿ ಸಿದ್ದೀಕ್ ಪನಾಮ, ಕೆ.ಎಂ. ಶಾಫಿ ಹಾಜಿ, ಇಕ್ಬಾಲ್ ಕೆ.ಸಿ. ರೋಡ್, ಇಬ್ರಾಹಿಂ ಸರಪಾಡಿ, ಮಜೀದ್ ಉಸ್ತಾದ್ ಕೆ.ಸಿ. ರೋಡ್, MJM ಇದರ ನೂತನ ಸದಸ್ಯರಾದ ದಾವೂದ್ ಮಣಿಮಜಲ್, ಪಿ. ಎಚ್. ಲತೀಫ್ ಕೆ.ಸಿ ರೋಡ್ , ಜವಾಝ್ ಕಲ್ಲಡ್ಕ , ಝಕಾರಿಯಾ ಗೋಳ್ತಮಜಲ್, ಪಿ.ಎಚ್. ಶೇಖಬ್ಬ ಕೆ.ಸಿ. ರೋಡ್, ವಿ.ಕೆ. ಖಾದರ್, ಕುಂಞ ಮೋನು ಹಾಜಿ, ರಹಿಮಾನ್ campco, ಚೆರೆಮೋನಾಕ, ಉಸ್ತಾದ್ ಜಾಫರ್ ಷರೀಫ್, ಉಸ್ತಾದ್ ಅಬ್ಬಾಸ್ ಮುಸ್ಲಿಯಾರ್, ಉಸ್ತಾದ್ ಅಬ್ದುಲ್ಲಾ ಮುಸ್ಲಿಯಾರ್ ಹಾಗೂ ಇನ್ನಿತರ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಶುದ್ದೀನ್ ನಿರೂಪಿಸಿದರೆ ಫವಾಝ್ ಸನ್ಲೈಟ್ ವಂದಿಸಿದರು.
ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ