ಆತೂರು ಶಂಸುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಹಲ್ಯಾರ

ಆತೂರು ಶಂಸುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಹಲ್ಯಾರ
republicday728
republicday468
republicday234

ಆತೂರು: ಶಂಸುಲ್ ಉಲಮಾ ಕ್ರಿಯಾ ಸಮಿತಿ ಅತೂರು ಇದರ 7ನೇ ವಾರ್ಷಿಕ ಮಹಾಸಭೆಯು ಇಲ್ಲಿನ ಮುಹಿಯುದ್ದಿನ್ ಜುಮಾ ಮಸೀದಿ ಮದರಸ ಸಭಾಂಗಣದಲ್ಲಿ ನಡೆಯಿತು.

      ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಗಳ್ ಫೈಝಿ ಅತೂರುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೆ.ಎಂ.ಎಚ್ ಫಾಝಿಲ್ ಹನೀಫಿ ಉದ್ಘಾಟಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಬ್ದುಲ್‌ ಕರೀಂ ಹೆಂತಾರ್ ವರದಿ ವಾಚಿಸಿ, ಲೆಕ್ಕ ಪತ್ರವನ್ನು ಮಂಡಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
      ಅಧ್ಯಕ್ಷರಾಗಿ ಅಬ್ದುಲ್  ಅಝೀಝ್ ಹಲ್ಯಾರ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಕರೀo ಹೆಂತಾರ್, ಕೋಶಾಧಿಕಾರಿಯಾಗಿ ಅಶ್ರಫ್ ಮಾರ್ಜಾಲ್, ಉಪಾಧ್ಯಕ್ಷರುಗಳಾಗಿ ಫಾರೂಕ್ ಎಲ್ಯಂಗ ಹಾಗೂ ಬದ್ರುದ್ದೀನ್ ಮಾರ್ಜಾಲ್, ಕಾರ್ಯದರ್ಶಿಗಳಾಗಿ ಉಸ್ಮಾನ್ ಎಲ್ಯಂಗ ಹಾಗೂ ಎ.ಎಸ್. ಮುನೀರ್ ಎಲ್ಯಂಗ, ಸಂಘಟನಾ ಕಾರ್ಯದರ್ಶಿಗಳಾಗಿ ಉಮರುಲ್ ಫಾರೂಕ್ ಬಿ. ಹಾಗೂ ಅಬ್ದುಲ್ ಅಝೀಝ್ ಪಾಲ್ತಾಡಿ ರವರನ್ನು ಆಯ್ಕೆ ಮಾಡಲಾಯಿತು.
      ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ ಎ ಮರ್ಧಾಳ, ಅಶ್ರಫ್ ಎನ್.ಎನ್. ಹಲ್ಯಾರ, ಝೈನುದ್ದೀನ್ ಮಾರ್ಜಾಲ್, ಸಿಯಾಬ್ ಕಲಾಯಿ, ಆಸೀಫ್ ಹೇಂತಾರ್, ರಿಯಾಝ್ ಎಲ್ಯಂಗ, ಶರೀಫ್ ಎಚ್.ಕೆ, ಮುನೀರ್ ಮಾರ್ಜಾಲ್, ನಾಸಿರ್ ಆರ್ ಕೆ, ಜಲೀಲ್ ಆತೂರುಬೈಲ್, ಮುಸ್ತಫಾ ಹೆಂತಾರ್ ಹಾಗು ನಾಸಿರ್ ಕಳಾಯಿಯವರನ್ನು ಅಯ್ಕೆ ಮಾಡಲಾಯಿತು.
      ಸಲಹಾ ಸಮಿತಿ ಸದಸ್ಯರಾಗಿ ಅಸ್ಸಯ್ಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಗಳ್ ಫೈಝಿ, ಕೆ.ಎಂ.ಎಚ್ ಫಾಝಿಲ್ ಹನೀಫಿ, ಮೂಸ ಮುಸ್ಲಿಯಾರ್, ಆದಂ ಹೆಂತಾರ್, ಅಬ್ದುಲ್ಲ ಹಾಜಿ, ಹೈದರ್ ಕಳಾಯಿ, ಫಳುಲುದ್ದೀನ್ ಹೆಂತಾರ್, ರಝಾಕ್ ಹೆಂತಾರ್ ಮತ್ತು ಎಚ್.ಕೆ. ಅಬ್ದುಲ್ ರಹಿಮಾನ್ ರವರನ್ನು ಅಯ್ಕೆ ಮಾಡಲಾಯಿತು.
      ಅಬ್ದುಲ್ ಕರೀಂ ಹೇಂತಾರ್ ಸ್ವಾಗತಿಸಿ, ಪಿ.ಎ ಮರ್ಧಾಳ ಧನ್ಯವಾದ ಸಮರ್ಪಿಸಿದರು.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ