ಆಕ್ಷಿಜನ್ ಗಾಗಿ 22 ಲಕ್ಷದ ಕಾರನ್ನೇ ಮಾರಾಟ ಮಾಡಿದ ಶಾನವಾಝ್ ಶೇಖ್

ಆಕ್ಷಿಜನ್ ಗಾಗಿ  22 ಲಕ್ಷದ ಕಾರನ್ನೇ ಮಾರಾಟ ಮಾಡಿದ ಶಾನವಾಝ್ ಶೇಖ್
republicday728
republicday468
republicday234

ಮುಂಬೈ: ಮುಂಬೈಯಲ್ಲಿ ಬಡವರ ಆಕ್ಸಿಜನ್ ಸೇವೆಗಾಗಿ ತನ್ನ 22 ಲಕ್ಷ ಮೌಲ್ಯದ ಕಾರನ್ನೇ ಮಾರಾಟ ಮಾಡಿದ ಯುವಕನೊಬ್ಬ ಭಾರೀ ಸುದ್ದಿಯಾಗಿದ್ದಾನೆ.

     ದಿನದಿಂದ ದಿನಕ್ಕೆ ಕೋವಿಡ್‌ -19 ಪ್ರಕರಣ ಏರುತ್ತಲೇ ಇದ್ದು ಪರಿಸ್ಥಿತಿ ಬಿಗಡಾಯಿಸುತ್ತಿದೆ.  ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿರುವ ಕೋವಿಡ್ ಸೋಂಕಿತ ಬಡ ರೋಗಿಗಳಿಗೆ ಉಚಿತ ಆಕ್ಸಿಜನ್ ಒದಗಿಸಿಕೊಡುವ ಸಲುವಾಗಿ ಮುಂಬೈಯ ಯುವಕ ಶಾನವಾಝ್ ತನ್ನಲ್ಲಿದ್ದ 22 ಲಕ್ಷ ಮೌಲ್ಯದ ಎಸ್​ಯುವಿ ಕಾರನ್ನೇ ಮಾರಾಟ ಮಾಡಿದ್ದಾನೆ.

     ದುಡ್ಡಿನ ಮುಂದೆ ಎಲ್ಲವೂ ಗೌಣವಾಗಿರುವ ಈ ಕಾಲದಲ್ಲಿ ಬಡ ರೋಗಿಗಳ ಸೇವೆಗಾಗಿ ತನ್ನ ಕಾರನ್ನೇ ಮಾರಿದ ಶಾನವಾಝ್‌  ನಿಜ ಜೀವನದ ಹೀರೋ ಆಗಿದಾನೆ. ಯುನಿಟಿ ಅಂಡ್ ಡಿಗ್ನಿಟಿ ಫೌಂಡೇಷನ್ ಎಂಬ ಸಂಸ್ಥೆಯ ಮೂಲಕ ಮಲಾಡ್ ಪ್ರದೇಶದಲ್ಲಿರುವ ರೋಗಿಗಳಿಗೆ ಶೇಖ್ ಉಚಿತ ಆಕ್ಸಿಜನ್ ಪೂರೈಸುತ್ತಿದ್ದಾರೆ.  ಪ್ರಸ್ತುತ ಶೇಖ್  500 ರಿಂದ 600 ಕೊವಿಡ್ ಸೋಂಕಿತರಿಗೆ ಉಚಿತ ಆಕ್ಸಿಜನ್ ಸಿಲಿಂಡರ್ ಒದಗಿಸುತ್ತಿದ್ದಾರೆ. ಸರಕಾರವೇ ಕೈಚೆಲ್ಲಿ ಕುಳಿತಿರುವ ಈ ಸನ್ನಿವೇಶದಲ್ಲಿ ತನ್ನ ಸ್ವಂತ ಖರ್ಚಿನಲ್ಲೇ ರೋಗಿಗಳ ಶುಶ್ರೂಷೆ ಮಾಡುತ್ತಿರುವ ಶಾನವಾಝ್ ಶೇಖ್ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ