ಅಲ್-ಬಿರ್ರ್ ವಿದ್ಯಾಭ್ಯಾಸದ ಅಗತ್ಯತೆ

ಜೀವನ ಹೋರಾಟದಲ್ಲಿ ನಿರತರಾಗಿರುವ ಯಾವುದೇ ತಂದೆಯು, ಸಮಯಕ್ಕನುಗುಣವಾಗಿ ತನ್ನ ಮಕ್ಕಳಿಗೆ ಜೀವನದ ನಿಯಮಗಳನ್ನು ಮತ್ತು ಇಸ್ಲಾಮೀ ಶಿಷ್ಟಾಚಾರಗಳನ್ನು ಸಮನ್ವಯದಿಂದ ಕಲಿಸಲು ಸಾಧ್ಯವಾಗದಿರಬಹುದು. ನಾವು ನಮ್ಮ ಮಕ್ಕಳನ್ನು ಕಲಾ ಶಾಲೆಗಳಿಗೆ ಸೇರಿಸುವ ಮೂಲಕ ಇಂತಹ ಕೊರತೆಗಳನ್ನು ನೀಗಿಸಬೇಕಾಗಿದೆ.

ಅಲ್-ಬಿರ್ರ್ ವಿದ್ಯಾಭ್ಯಾಸದ ಅಗತ್ಯತೆ

(ಅಬ್ದುಸ್ಸಮದ್ ಪೂಕೊಟ್ಟೂರ್ ರವರ ಲೇಖನದಿಂದ)

ವಿಶ್ವಾಸ ಮತ್ತು ಆದರ್ಶಗಳಲ್ಲಿ ಕಲಬೆರಕೆಯಿಲ್ಲದೆ ಆಯಾಯ ಕಾಲಕ್ಕೆ ಹೊಂದಿಕೊಂಡು ಸಂಚರಿಸುವ ಪ್ರಸ್ಥಾನವಾಗಿದೆ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ. ಅದರ ಅಧೀನದಲ್ಲಿರುವ ವಿದ್ಯಾಭ್ಯಾಸ ಬೋರ್ಡ್, ಶಿಕ್ಷಣ ಕ್ಷೇತ್ರದ ಬಗ್ಗೆ ವಿವಿಧ ಚಿಂತನೆಗಳನ್ನು ಹಲವಾರು ಬಾರಿ ಚರ್ಚೆ ನಡೆಸಿ ಎಳೆಯ ಮಕ್ಕಳನ್ನು ಗುರಿಯಾಗಿಸಿಕೊಂಡು ಸ್ಥಾಪಿಸಿದ ಪದ್ಧತಿಯೇ ಅಲ್-ಬಿರ್ರ್.  ಇದು ತನ್ನ ಹಳೆಯ ಮತ್ತು ಹೊಸ ವೈಶಿಷ್ಟತೆಯನ್ನು ಉಳಿಸಿಕೊಂಡು ಸಮಕಾಲೀನ ಸಂದರ್ಭದಲ್ಲಿ ಸಮುದಾಯದ ಒಳಿತು ಮತ್ತು ಸಮೃದ್ಧಿಯ ಉದ್ದೇಶವನ್ನಿಟ್ಟುಕೊಂಡಿದೆ.

      ಜಗತ್ತಿನಲ್ಲಿ ಅನೇಕ ಪ್ರಿಸ್ಕೂಲ್ ಗಳು ಮತ್ತು ವಿಭಿನ್ನ ಪಠ್ಯಕ್ರಮಗಳಿವೆ.  ಅವುಗಳ ಕುರಿತ ವಿವರವಾದ ಅಧ್ಯಯನಗಳನ್ನು ನಡೆಸುವ ಮೂಲಕ ಅಲ್-ಬಿರ್ರ್  ಶಿಕ್ಷಣ ವ್ಯವಸ್ಥೆಯ ಅಕಾಡಮಿಕ್ ಬೋರ್ಡ್ ಸಾಗಿ ಬಂದಿದೆ. ಪಾಶ್ಚಾತ್ಯ ಮತ್ತು ಪೌರಾತ್ಯ ರಾಷ್ಟ್ರಗಳ ಫ್ರೀ ಪ್ರೈಮರಿ ಪದ್ಧತಿ, ಅರೇಬಿಯನ್ ರಾಷ್ಟ್ರಗಳ ಕಲಿಕಾ ವಿಧಾನ ಮೊದಲಾದವುಗಳ ಸಂಶೋಧನೆಯಿಂದ ಲಭಿಸಿದ ಸಕಾರಾತ್ಮಕ ಅಂಶಗಳನ್ನು ಸೇರಿಸಿಕೊಂಡು, ಆಧುನಿಕ ಶಿಕ್ಷಣ ಪದ್ಧತಿಯ ಪರಿಣಾಮಕಾರಿಯಾದ ಅಂಶಗಳನ್ನು ಪ್ರಾಯೋಗಿಕ ರೂಪಕ್ಜೆ ತರಲು ಅಲ್-ಬಿರ್ರ್ ಪದ್ಧತಿಯನ್ನು ಆವಿಷ್ಕರಿಸಲಾಗಿದೆ. ವಿದೇಶ ರಾಷ್ಟ್ರಗಳಲ್ಲಿ ಅಧ್ಯಯನ ಮಾಡುವ ವಿಭಿನ್ನ ವಿಧಾನಗಳಿಗಿಂತ ಭಿನ್ನವಾಗಿ, ನಮ್ಮ ಸಂವಿಧಾನ ಮತ್ತು ನಮ್ಮ ದೇಶದ ಸರ್ಕಾರವು ನಿಗದಿಪಡಿಸುವ ಗುಣಾತ್ಮಕವೂ, ಪ್ರಾಯೋಗಿಕವೂ ಆದ ರೀತಿಯಲ್ಲಿ ಮಾತ್ರವೇ ಮುಂದೆ ಸಾಗಬೇಕು ಎಂಬ ನೀತಿಯನ್ನು ಸಮಸ್ಥ ಅಳವಡಿಸಿಕೊಂಡಿದೆ.

      ಇಬ್ನ್ ಅಬ್ಬಾಸ್ ವರದಿ ಮಾಡಿ ಹದೀಸ್‌ನಲ್ಲಿ ಈ ರೀತಿ ಕಂಡುಬರುತ್ತದೆ.  ಪ್ರವಾದಿ (ಸ.ಅ.) ಹೇಳಿದರು. "ನೀವು ನಿಮ್ಮ ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ಮತ್ತು ಅವರಿಗೆ ಉತ್ತಮ ನಡತೆಯನ್ನು ಕಲಿಸಿರಿ."

      ಮತ್ತೊಂದು ಹದೀಸಿನಲ್ಲಿ ಈ ರೀತಿ ಇದೆ.  'ಒಬ್ಬ ತಂದೆ ತನ್ನ ಮಗನಿಗೆ ನೀಡಬಹುದಾದ ಅತಿ ಶ್ರೇಷ್ಠವಾದ ಬಹುಮಾನ ಉತ್ತಮ ನಡವಳಿಕೆಯನ್ನು ಕಲಿಸುವುದಾಗಿದೆ.

      ಜೀವನ ಹೋರಾಟದಲ್ಲಿ ನಿರತರಾಗಿರುವ ಯಾವುದೇ ತಂದೆಯು, ಸಮಯಕ್ಕನುಗುಣವಾಗಿ ತನ್ನ ಮಕ್ಕಳಿಗೆ ಜೀವನದ ನಿಯಮಗಳನ್ನು ಮತ್ತು ಇಸ್ಲಾಮೀ ಶಿಷ್ಟಾಚಾರಗಳನ್ನು ಸಮನ್ವಯದಿಂದ ಕಲಿಸಲು ಸಾಧ್ಯವಾಗದಿರಬಹುದು. ನಾವು ನಮ್ಮ ಮಕ್ಕಳನ್ನು ಕಲಾ ಶಾಲೆಗಳಿಗೆ ಸೇರಿಸುವ ಮೂಲಕ ಇಂತಹ ಕೊರತೆಗಳನ್ನು ನೀಗಿಸಬೇಕಾಗಿದೆ.

      ಸಮಕಾಲೀನ ಸಮಾಜದಲ್ಲಿ ಇಸ್ಲಾಮಿಕ ಮೌಲ್ಯಗಳನ್ನು ಎತ್ತಿಹಿಡಿದು ಬದುಕಲು, ಧಾರ್ಮಿಕ ಅಧ್ಯಯನಗಳ ಜೊತೆಗೆ ಲೌಕಿಕ ಶಿಕ್ಷಣದ ಅಗತ್ಯವೂ ಇದೆ.  ಕೇವಲ ಲೌಕಿಕ ಶಿಕ್ಷಣದೊಂದಿಗೆ ನಮ್ಮ ಮಕ್ಕಳಿಗೆ ನಾವು ಉದ್ಧೇಶಿಸುವ ಪ್ರಯೋಜನಗಳು ಸಿಗಲಾರದು ಎಂಬುದನ್ನು ನಾವು ಗಂಭೀರವಾಗಿ ತಿಳಿದಿರಬೇಕು. ಎಳೆಯ ವಯಸ್ಸಿನಿಂದಲೇ  ಸಮನ್ವಯ ಬೋಧನಾ ವಿಧಾನವನ್ನು ಮಕ್ಕಳಿಗೆ ನೀಡಿದರೆ, ಸಕಾರಾತ್ಮಕ ಗುಣಗಳನ್ನು ವಿದ್ಯಾರ್ಥಿಗಳಿಂದ ಸ್ಪಷ್ಟವಾಗಿ ಕಾಣಬಹುದು.

      ಪೂರ್ವ-ಪ್ರಾಥಮಿಕ (ಫ್ರೀ ಪ್ರೈಮರಿ) ಹಂತದಿಂದ ಅತ್ಯಾಧುನಿಕ ಕಲಾ ಸೌಲಭ್ಯಗಳೊಂದಿಗೆ ಇಂತಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ ಅಲ್-ಬಿರ್ರ್ ಭರವಸೆಯ ಪ್ರಗತಿಯನ್ನು ಸಾಧಿಸುತ್ತಿದೆ.  ಫ್ರೀ ಪ್ರೈಮರಿ ಸ್ಕೂಲ್ ಯಾಕೆ ಎಂಬ ಪ್ರಶ್ನೆಗೆ ಆಧುನಿಕ ಶಿಕ್ಷಣ ತಜ್ಞರ ಉತ್ತರ ಹೀಗಿದೆ:  "ಪೂರ್ವಭಾವಿ ಶಿಕ್ಷಣದ ಉದ್ದೇಶವೆಂದರೆ ಮಾನವೀಯತೆ, ಮತ್ತು ಸಾಮಾಜಿಕ ನೈತಿಕತೆ ಮೂಲಕ ಜವಾಬ್ದಾರಿಯುತ ಸದಸ್ಯತ್ವಕ್ಕೆ ಮಕ್ಕಳ ಬೆಳವಣಿಗೆಯನ್ನು ಬೆಂಬಲಿಸುವುದು ಮತ್ತು ಅವರಿಗೆ ಜೀವನದಲ್ಲಿ ಅಗತ್ಯವಾದ ಜ್ಞಾನ ಮತ್ತು ಕೌಶಲ್ಯವನ್ನು ಒದಗಿಸುವುದು.

      ಇದರ ಉದ್ದೇಶವು ಕೇವಲ ಜ್ಞಾನ ಸಂಪಾದನೆಯಲ್ಲ. ಜ್ಞಾನ ಸಂಪಾದನೆಯ ಜೊತೆಗೆ ಮಾನವೀಯತೆಯನ್ನು ಬೆಳೆಸುವುದು ಮತ್ತು ಧಾರ್ಮಿಕ, ನೈತಿಕ ಜವಾಬ್ದಾರಿಯ ಪೀಳಿಗೆಯನ್ನು ರಚಿಸುವುದಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಬೆಳೆಯುತ್ತಿರುವ ಸಮುದಾಯವನ್ನು ಈ ಗುರಿಯತ್ತ ಕೊಂಡೊಯ್ಯುವುದು ಅಲ್-ಬಿರ್ರ್ ನ ಮುಖ್ಯ ಗುರಿಯಾಗಿದೆ.

      ಶಿಕ್ಷಣ, ಧಾರ್ಮಿಕತೆ, ಆದರ್ಶಗಳ ಪ್ರಜ್ಞೆ, ನಾಯಕತ್ವದ ಅನುಸರಣೆ ಮತ್ತು ಪೂರ್ವಿಕ ಮಹಾತ್ಮರನ್ನು ಗೌರವಿಸುವುದು ಮುಂತಾದವುಗಳನ್ನು ಕಲಿತುಕೊಂಡು ಸಮಸ್ತದ ನೆರಳಿನಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳನ್ನು ಅಲ್-ಬಿರ್ರ್ ಸಮರ್ಪಿಸುತ್ತಿದೆ.

      ಚಿಕ್ಕ ವಯಸ್ಸಿನಿಂದಲೂ ಮಕ್ಕಳಿಗೆ ನೀಡಬೇಕಾದ ಪರಿಪಾಲನೆ ಮತ್ತು ತರಬೇತಿಯನ್ನು ವೈಜ್ಞಾನಿಕ ರೂಪದಲ್ಲಿ ಸಮೀಕರಣ ನಡೆಸಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಜ್ಞಾನ ಮತ್ತು ಅನುಭವವನ್ನು ಪಡೆಯಲು (ದೃಶ್ಯ-ಶ್ರಾವ್ಯ)ಆಡಿಯೋ-ವೀಡಿಯೋ ಮಾಧ್ಯಮದ ಸಹಾಯದಿಂದ ಕಾರ್ಯಕ್ಷಮತೆ ಆಧಾರಿತ ಕಲಿಕೆಯು ಮಕ್ಕಳಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಅರಿವನ್ನು ಪಡೆಯುವ ವಿಧಾನಗಳನ್ನು ಅಳವಡಿಸಲಾಗಿದೆ. ಜ್ಞಾನವನ್ನು ಮೋಜಿನ ರೀತಿಯಲ್ಲಿ ಆಸಕ್ತಿದಾಯಕವಾಗಿ ನೀಡುವ ಪ್ರಕ್ರಿಯೆಯನ್ನು ಸಮುದಾಯವು ಎರಡೂ ಕೈಗಳಿಂದ ಸ್ವೀಕರಿಸಿದೆ.  ಮಕ್ಕಳ ಮನೋವಿಜ್ಞಾನ, ಬೋಧನಾ ವಿಧಾನ, ಐಸಿಟಿ, ಶಾಲಾ ನಿರ್ವಹಣೆ, ಅಂತರ್ಗತ ಶಿಕ್ಷಣದಲ್ಲಿ ತರಬೇತಿ ಪಡೆದ ಶಿಕ್ಷಕಿಯರು ತಾಳ್ಮೆಯಿಂದ ಈ ಕ್ಷೇತ್ರದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾದರಿ ವಿದ್ಯಾರ್ಥಿ, ಅನುಕರಣೀಯ ಶಿಕ್ಷಕರು ಮತ್ತು ಸೇವಕರ ಮೂಲಕ ವಿದ್ಯಾರ್ಥಿಗಳಿಗೆ ದೈನಂದಿನ ಅಭ್ಯಾಸಗಳು, ಜೀವನ ಶಿಷ್ಟಾಚಾರ ಮತ್ತು ಕೌಶಲ್ಯಗಳನ್ನು ನೀಡಲಾಗುತ್ತದೆ.

  • ಪವಿತ್ರ ಕುರಾನ್ ಪಠಣ ಮತ್ತು ತಜ್ವೀದ್ ನಿಯಮಗಳ ಪ್ರಕಾರ ಕುರಾನ್ ಪಠಣವನ್ನು ಒತ್ತಿ ಹೇಳುವ ಅಲ್-ಬಿರ್ರ್ ತರಗತಿಗಳಲ್ಲಿ, ದೈನಂದಿನ ಜೀವನದಲ್ಲಿ ಬಳಸಬೇಕಾದ ಅಝ್ಕಾರ್ ಮತ್ತು ಪವಿತ್ರ ಹದೀಸ್ ವಚನಗಳನ್ನು ಉಚ್ಚಾರಶುದ್ಧಿಯೊಂದಿಗೆ ಕಲಿಸಲಾಗುತ್ತದೆ.
  • ಅರೇಬಿಕ್ ಭಾಷಾ ಅಧ್ಯಯನ, ಇಂಗ್ಲೀಷ್, ಪರಿಸರ ಅಧ್ಯಯನ, ಗಣಿತ ಮತ್ತು ಕನ್ನಡ ಫ್ರೀ ಪ್ರೈಮರಿಯಲ್ಲೂ, ಹಿಂದಿ, ಐಟಿ ಮತ್ತು ಸಾಮಾನ್ಯ ಜ್ಞಾನಗಳು ಪ್ರೈಮರಿಯಲ್ಲಿ ಕಲಿಸುವ ವಿಷಯಗಳಾಗಿವೆ.
  • ತಜ್ಞರ ಸಮಿತಿಯ ಮೇಲ್ವಿಚಾರಣೆಯಲ್ಲಿ ಪಠ್ಯಪುಸ್ತಕ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಅವುಗಳನ್ನು ನವೀಕರಿಸಲು ಸಮರ್ಥವಾಗಿರುವ ಅಧ್ಯಾಪಕರನ್ನು ಅಲ್-ಬಿರ್ರ್ ಬಳಸಿಕೊಳ್ಳುತ್ತದೆ.
  • ಸಂಸ್ಥೆಯ ಶೈಕ್ಷಣಿಕ ಉತ್ಕೃಷ್ಟತೆಯ ಪರೀಕ್ಷೆ ಮತ್ತು ಶಕ್ತವಾದ  ಮೇಲ್ವಿಚಾರಣಾ ವ್ಯವಸ್ಥೆಯು ಶಾಲೆಗಳಲ್ಲಿ ಉತ್ತಮ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
  •  ಫ್ಯಾಮಿಲಿ ಮೀಟ್, ಶಿಕ್ಷಕರಿಗೆ ಮಾಸಿಕ ಆಧಾರದ ಮೇಲೆ ಪೋಷಕರೊಂದಿಗೆ ಸಂವಹನ ನಡೆಸಲು ಅವಕಾಶವನ್ನು ಒದಗಿಸುತ್ತದೆ.
  • ದಿನನಿತ್ಯದ ಕಾರ್ಯವಿಧಾನಗಳಲ್ಲಿ ಪಿಟಿಎಗಳ ಪಾಲ್ಗೊಳ್ಳುವಿಕೆ ಮತ್ತು ಪೋಷಕರಿಗೆ ನೀಡುತ್ತಿರುವ ಪೇರೆಂಟಿಂಗ್ ಗಮನಾರ್ಹವಾಗಿದೆ
  • ಅತ್ಯುತ್ತಮ ಸಂಸ್ಥೆಗೆ ಕೋಟ್ಟುಮಲ ಬಾಪು ಮುಸ್ಲಿಯಾರ್ ಸ್ಮಾರಕ ಪ್ರಶಸ್ತಿಯನ್ನೂ, ಶಿಕ್ಷಕರಿಗೆ ವರ್ಷದ ಮಾರ್ಗದರ್ಶಿ (ಮೆಂಟರ್ ಓಫ್ ದಿ ಇಯರ್), ಅತ್ಯುತ್ತಮ ಮಾರ್ಗದರ್ಶಕ (ಬೆಸ್ಟ್ ಮೆಂಟರ್) ಮತ್ತು ಅತ್ಯುತ್ತಮ ಪ್ರದರ್ಶನ (ಬೆಸ್ಟ್ ಪರ್ಫೋಮೆನ್ಸ್)  ಪ್ರಶಸ್ತಿಗಳನ್ನು ನೀಡಲಾಗುತ್ತದೆ.
  • ಪೋಷಕರು, ಶಿಕ್ಷಕರು ಮತ್ತು ಮಕ್ಕಳಿಗಾಗಿ ಪ್ರತಿಭಾ ಪರೀಕ್ಷೆಗಳನ್ನು ನಡೆಸುವ ಏಕೈಕ ಶೈಕ್ಷಣಿಕ ಪದ್ಧತಿ ಅಲ್-ಬಿರ್ರ್ ಮಾತ್ರವಾಗಿದೆ.
  • ಎರಡು ವರ್ಷಗಳ ಪ್ರೀ ಪ್ರೈಮರಿ ಶಿಕ್ಷಣವನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಅಲ್-ಬಿರ್ರ್ ನಡೆಸುವ ಸಮಾವೇಶದಲ್ಲಿ ಕೋರ್ಸ್ ಪ್ರಮಾಣಪತ್ರಗಳನ್ನು ನೀಡಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿ ಕೊಡಲಾಗುತ್ತದೆ.

      'ಅಲ್-ಬಿರ್ರ್ ಕಿಡ್ಸ್ ಫೆಸ್ಟ್' ಒಂದು ಗಮನಾರ್ಹ ಕಾರ್ಯಕ್ರಮವಾಗಿದ್ದು, ಅದು ಅಲ್-ಬಿರ್ರ್ ಶಾಲೆಗಳ ಉತ್ಕೃಷ್ಟತೆಯನ್ನು ತೋರಿಸುತ್ತದೆ. ಪಠ್ಯಕ್ರಮದಲ್ಲಿ ಮಾದರಿ ವಿದ್ಯಾರ್ಥಿಯ ಸಾಧನೆ  ಈ ಹಿಂದಿನ ವರ್ಷಗಳಲ್ಲಿ ಅದ್ಭುತವಾಗಿತ್ತು. ಅಲ್-ಬಿರ್ರ್ ಇನ್ನಷ್ಟೂ ಶಕ್ತಿಯೊಂದಿಗೆ ಮುನ್ನುಗ್ಗುತ್ತಿದೆ. ಅಲ್-ಬಿರ್ರ್ ದಾಖಲಾತಿಗಾಗಿ ಪೋಷಕರಲ್ಲಿ ಇಂದು ಸ್ಪರ್ಧೆ ಆರಂಭವಾಗಿದೆ. ಕರ್ನಾಟಕ ಮತ್ತು ಸಲಾಲಾದಲ್ಲಿ ಅಲ್-ಬಿರ್ರ್ ಶಾಲೆಗಳಿಗೆ ಪ್ರವೇಶಿಸಲು ಪೋಷಕರ ಆಸಕ್ತಿ, ಜೊತೆಗೆ ಹೆಚ್ಚಿನ ಶಾಲೆಗಳು ಅಂಗಸಂಸ್ಥೆಗಾಗಿ ಸಮೀಪಿಸುತ್ತಿರುವುದು ಅಲ್-ಬಿರ್ರ್ ಪಠ್ಯಕ್ರಮದ ಸಾಮಾನ್ಯ ಸ್ವೀಕಾರಾರ್ಹತೆಯ ಪ್ರತೀಕವಾಗಿದೆ. ಈ ಅಧ್ಯಯನ ಕ್ರಮವನ್ನು ಸೆಕೆಂಡರಿ ಮತ್ತು ಹೈಯರ್ ಸೆಕೆಂಡರಿ ಹಂತಕ್ಕೆ ತರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಇದು ನಿಸ್ಸಂದೇಹವಾಗಿಯೂ ಅಲ್-ಬಿರ್ರ್ ನ್ನು ಸಮಸ್ತದ ಅಧೀನದಲ್ಲಿ ಗಮನಾರ್ಹ ಮತ್ತು ನವೀಕೃತ ಶೈಕ್ಷಣಿಕ ಉಪಕ್ರಮಗಳಲ್ಲಿ ಒಂದನ್ನಾಗಿ ಮಾಡುತ್ತದೆ.

 

 

 

 

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ