ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಂದ ವಿದ್ಯಾಸಿರಿ ಯೋಜನೆಗೆ ಅರ್ಜಿ ಆಹ್ವಾನ

ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಂದ ವಿದ್ಯಾಸಿರಿ ಯೋಜನೆಗೆ ಅರ್ಜಿ ಆಹ್ವಾನ

ಮಂಗಳೂರು: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ 2021-22ನೇ ಸಾಲಿನ ವಿದ್ಯಾಸಿರಿ ಯೋಜನೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಲ್ಪ ಸಂಖ್ಯಾತರ ಇಲಾಖಾ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

      ಮೆಟ್ರಿಕ್‌ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ವಿದ್ಯಾರ್ಥಿ ನಿಲಯಗಳಲ್ಲಿ  ಪ್ರವೇಶ ದೊರಕದೆ ಇರುವ ಅಲ್ಪ ಸಂಖ್ಯಾತ ಸಮುದಾಯದ (ಮುಸ್ಲಿಂ, ಕ್ರಶ್ಚಿಯನ್, ಜೈನ್‌, ಭೌದ್ದ, ಸಿಖ್‌ ಮತ್ತು ಪಾರ್ಸಿ) ಅರ್ಹ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಅನುಕೂಲವಾಗುವಂತೆ ಊಟ ಮತ್ತು ವಸತಿ ಸೌಲಭ್ಯಕ್ಕೆ ಸಹಾಯಧನ ಒದಗಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

      ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು, ವ್ಯಾಸಂಗ ಮಾಡುವ ಕಾಲೇಜಿನಿಂದ ಕನಿಷ್ಠ 5 ಕಿ.ಮೀ. ದೂರದವರಾಗಿರಬೇಕು. ಒಂದೇ ನಗರದ ವ್ಯಾಪ್ತಿಯಲ್ಲಿ ಇರುವವರು ಅರ್ಹರಾಗುವುದಿಲ್ಲ. ಗೂಗಲ್‌ ಫಾರ್ಮ್‌ ಮೂಲಕ ಭರ್ತಿ ಮಾಡಿದ ಅರ್ಜಿಯ ಜೊತೆ ದೃಢೀಕೃತ ದಾಖಲಾತಿಗಳನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರ ಕಛೇರಿ, ಮೌಲಾನಾ ಆಝಾದ್‌ ಭವನ, ಓಲ್ಡ್‌ ಕೆಂಟ್‌ ರಸ್ತೆ, ಮಂಗಳೂರು ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ.

      ಅರ್ಜಿ ಸಲ್ಲಿಸಲು 2021 ನವೆಂಬರ್‌ 30 ಕೊನೆಯ ದಿನವಾಗಿದ್ದು, ಇಲಾಖಾ ವೆಬ್‌ಸೈಟ್ (https://dom.karnataka.gov.in/dakshina_kannada/public) ‌ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರು ತಿಳಿಸಿದ್ದಾರೆ.

ಅಗತ್ಯವಿರುವ ದಾಖಲೆ ಪತ್ರಗಳು:

1. ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

2. ಬ್ಯಾಂಕ್‌ ಪಾಸ್‌ ಬುಕ್‌ನ ಮೊದಲ ಪುಟದ ಪ್ರತಿ.

3. ಹಿಂದಿನ ವರ್ಷದ ಅಂಕ ಪಟ್ಟಿ.

4. ಮನೆಯಿಂದ ಕಾಲೇಜಿಗಿರುವ ದೂರದ ಪ್ರಮಾಣ ಪತ್ರ.

5. ಪಡಿತರ ಚೀಟಿ / ಗುರುತಿನ ಚೀಟಿ / ಆಧಾರ್‌ ಕಾರ್ಡ್‌ (ಯಾವುದಾದರೂ ಒಂದು)

6. ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ