ಅರ್ಶದಿ ರೈಟಿಂಗ್ ಹಬ್ ನಿಂದ ಶೈಖಾನಿ ಬಿಡುಗಡೆ

ಅರ್ಶದಿ ರೈಟಿಂಗ್ ಹಬ್ ನಿಂದ ಶೈಖಾನಿ ಬಿಡುಗಡೆ
republicday728
republicday468
republicday234

ಅರ್ಶದಿ ರೈಟಿಂಗ್ ಹಬ್ ನಿಂದ ಶೈಖಾನಿ ಪ್ರಕಾಶ

ಮಂಗಳೂರು: ಸುಮಾರು ನಾಲ್ಕು ದಶಕಗಳ ಕಾಲ ಕರ್ನಾಟಕ ಮತ್ತು ಕೇರಳದ ಇಸ್ಲಾಮಿ ಸಾರಸ್ವತ ರಂಗದಲ್ಲಿ ವಿರಾಜಮಾನರಾಗಿ ನೂರಾರು ಮಹಲ್ಲುಗಳಲ್ಲಿ ಖಾಝಿಗಳಾಗಿದ್ದ ಮರ್ಹೂಂ ಕೋಟ ಉಸ್ತಾದ್ ಹಾಗೂ ಶಹೀದೇ ಮಿಲ್ಲತ್ ಸಿಯಂ ಉಸ್ತಾದರುಗಳ ಜೀವನ ಶೈಲಿಯನ್ನಾಧರಿಸಿದ ಶೈಖಾನಿ ಎಂಬ ಗ್ರಂಥವು ಜನವರಿ 8 ರಂದು ಬಿಡುಗಡೆಯಾಗಲಿದೆ ಎಂದು ಅರ್ಶದೀಸ್ ಪ್ರಧಾನ ಕಾರ್ಯದರ್ಶಿ ನಝೀರ್ ಅರ್ಷದಿ ತಿಳಿಸಿದ್ದಾರೆ.

ಪಾಣೆಮಂಗಳೂರಿನ ನೆಹರೂ ನಗರ ಮಸೀದಿಯ ಸಭಾಂಗಣದಲ್ಲಿ ಅಪರಾಹ್ನ 3ಗಂಟೆಗೆ ಆರಂಭವಾಗುವ ಕಾರ್ಯಕ್ರಮವು ಸಾಯಂಕಾಲ 6 ಗಂಟೆಯ ತನಕ ನಡೆಯಲಿದೆ. ಅರ್ಶದೀಸ್ ಅಧ್ಯಕ್ಷರಾದ ಖಲೀಲ್ ಅರ್ಷದಿ ಮಾಡನ್ನೂರು ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಸ್ತ ಉಪಾಧ್ಯಕ್ಷರೂ, ಮಲಬಾರ್ ಇಸ್ಲಾಮಿಕ್ ಸೆಂಟರ್ ನ ಅಧ್ಯಕ್ಷರೂ ಆಗಿರುವ ಶೈಖುನಾ ಯು.ಎಂ. ಉಸ್ತಾದ್ ನೇರವೇರಿಸಲಿರುವರು. ಅರ್ಶದೀಸ್ ಅಸೋಸಿಯೇಷನ್ ನ ಅರ್ಶದಿ ರೈಟರ್ಸ್ ಹಬ್ ಹೊರ ತರುವ ಶೈಖಾನಿ ಪುಸ್ತಕವನ್ನು ಮಂಗಳೂರು ಖಾಝಿ ಅಲ್ ಹಾಜ್ ಶೈಖುನಾ ತ್ವಾಖ ಅಹ್ಮದ್ ಮುಸ್ಲಿಯಾರ್ ಬಿಡುಗಡೆ ಗೊಳಿಸಲಿದ್ದಾರೆ. ನೆಹರೂ ನಗರ ಜುಮ್ಮಾ ಮಸೀದಿಯ ಅಧ್ಯಕ್ಷರಾದ P.S. ಮೋನು ಶೈಖಾನಿ ಪ್ರಥಮ ಪ್ರತಿಯನ್ನು ಸ್ವೀಕರಿಸಲಿದ್ದಾರೆ. ಸಮಸ್ತ ಮುಶಾವರ ಸದಸ್ಯರಾದ ಅಲ್ ಹಾಜ್ ಶೈಖುನಾ ಬಂಬ್ರಾಣ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಉಸ್ತಾದ್ ಹಾಗೂ ಮಾಡನ್ನೂರು ನೂರುಲ್ ಹುದಾ ಪ್ರಿನ್ಸಿಪಾಲ್ ಅಡ್ವಕೇಟ್ ಹನೀಫ್ ಹುದವಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ  ನಝೀರ್ ಅರ್ಶದಿ ವಿವರಿಸಿದರು.

     ಮರ್ಹೂಂ ಕೋಟ ಉಸ್ತಾದ್ ಹಾಗೂ ಶಹೀದೇ ಮಿಲ್ಲತ್ ಸಿಯಂ ಉಸ್ತಾದರುಗಳಿಬ್ಬರೂ ಸಾರ್ಥಕ ಬದುಕು ಸಾಗಿಸಿ ನಮ್ಮನ್ನಗಲಿ ಹೋಗಿದ್ದಾರೆ. ಇವರಿಬ್ಬರ ಜೀವನದಲ್ಲಿ ವಿದ್ಯಾರ್ಥಿಗಳಿಗೂ, ಉಸ್ತಾದರುಗಳಿಗೂ, ಸಂಘಟನಾ ಕಾರ್ಯಕರ್ತರಿಗೂ, ಉಲಮಾ- ಉಮರಾಗಳಿಗೂ, ಕುಟುಂಬ ಮುಖ್ಯಸ್ಥರಿಗೂ ಸಾಕಾಷ್ಟು ಮಾದರಿಗಳಿವೆ. ಅವರದು ಪರಿಪೂರ್ಣ ಬದುಕು. ಆಯುಷ್ಯವನ್ನಿಡೀ ದೀನೀ ಶಿಕ್ಷಣಕ್ಕಾಗಿ ವ್ಯಯಿಸಿ ಧನ್ಯ ಜೀವನವನ್ನು ಸಾಗಿಸಿದ ಈ ಇಬ್ಬರು ಮಹನೀಯರು ಇಲ್ಲಿ ಅನೇಕ ಶಿಕ್ಷಣ ಸಂಸ್ಥೆ, ಶಿಷ್ಯ ವೃಂದ, ವಿದ್ವತ್ತು ಹಾಗೂ ಪರಿಶುದ್ಧ ನೆನಪುಗಳನ್ನು ಉಳಿಸಿ ಹೋಗಿದ್ದಾರೆ. ಅವರ ಜೀವನ ಮತ್ತು ಸಾಧನೆಗಳು ಮುಂದಿನ ಪೀಳಿಗೆಗೆ ಒಂದು ಉತ್ತಮ ಮಾರ್ಗದರ್ಶನವಾಗಲಿದೆ. ಇದನ್ನು ಮನಗಂಡು ಅರ್ಶದಿ ರೈಟಿಂಗ್ ಹಬ್ ಇವರಿಬ್ಬರ ಜೀವನದ ಚರಿತ್ರೆಯನ್ನು ಪ್ರಕಟಿಸಲು ಮುಂದಾಗಿದೆ. ಈ ಗ್ರಂಥವು ಮುಂದಿನ ತಲೆಮಾರಿಗೆ ಖಂಡಿತಾ ಉಪಯೋಗಕರವಾಗಲಿದೆ. ಇದು ಕನ್ನಡ ಸಾಹಿತ್ಯದಲ್ಲಿ ಒಂದು ಅಮೂಲ್ಯ ಗ್ರಂಥ ಎಂದು ಅರ್ಶದೀಸ್ ಉಪಾಧ್ಯಕ್ಷ ಹಸನ್ ಅರ್ಶದಿ ಶೈಖಾನಿ ಗ್ರಂಥದ ಕುರಿತು ವಿವರಿಸಿದರು.
 ಜನವರಿ 8ರಂದು ನೆಹರೂ ನಗರ ಮಸೀದಿ ವಠಾರದಲ್ಲಿ ನಡೆಯುವ  ತಿಝ್ಕಾರ್ ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಸೆಮಿನಾರ್, ನೆನಪಿ ಕೂಟ ನಡೆಯಲಿದೆ. ಕಾರ್ಯಕ್ರಮದಲ್ಲಿ  ಹಲವಾರು ನಾಯಕರು, ಸಮಸ್ತ ಉಲಮಾ ಒಕ್ಕೂಟ ಇದರ ಮುಶಾವರ ಸದಸ್ಯರು, ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ