ಅರಿವು ಶೈಕ್ಷಣಿಕ ಸಾಲ ಯೋಜನೆ: ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಅರಿವು ಶೈಕ್ಷಣಿಕ ಸಾಲ ಯೋಜನೆ: ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಂದ  ಅರ್ಜಿ ಆಹ್ವಾನ

ಮಂಗಳೂರು: ಮುಸ್ಲಿಂ ಬೌದ್ದ, ಕ್ರಿಶ್ಚಿಯನ್, ಜೈನ್ಸ್, ಪಾರ್ಸಿ ಹಾಗೂ ಸಿಖ್ಖ್ ಜನಾಂಗದ ಇಂಜಿನಿಯರಿಂಗ್‌, ಮೆಡಿಕಲ್ ವಿದ್ಯಾರ್ಥಿಗಳಿಂದ 2021-22ನೇ ಸಾಲಿನ ಅರಿವು ಸಾಲ ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ತಿಳಿಸಿದೆ.

      2021-22ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗುವ ಸಿ.ಇ.ಟಿ/ನೀಟ್ (MBBS/BDS / AYUSH / Bachelor of Architecture / B.E / B.Tech ಮಾತ್ರ) ವಿದ್ಯಾರ್ಥಿಗಳಿಗೆ ನಿಗಮದ ಅರಿವು ಸಾಲ ಯೋಜನೆಯಡಿಯಲ್ಲಿ ಸಾಲ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಾಲ ಪಡೆಯಲು ಅಪೇಕ್ಷಿಸುವ ವಿದ್ಯಾರ್ಥಿಗಳು ನಿಗಮದ ವೆಬ್‌ಸ್ಶೆಟ್ kmdconline.karnataka.gov.in ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
 
 ಅರ್ಜಿದಾರರು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕಾದ ದಾಖಲೆ ಪತ್ರಗಳು:

• ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
• ಆಧಾರ್ ಕಾರ್ಡ್
• ಸಿ.ಇ.ಟಿ/ನೀಟ್ ಪರೀಕ್ಷೆ ಪ್ರವೇಶ ಪತ್ರ.
• ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಅಂಕ ಪಟ್ಟಿ
• 50ರೂಪಾಯಿಯ ಇ-ಸ್ಟಾಂಪ್‌ನೊಂದಿಗೆ ಇಂಡೆಮ್ನಿಟಿ ಬಾಂಡ್ (Indemnity Bond)
• ವಿದ್ಯಾರ್ಥಿಯ ಸ್ವಯಂ ದೃಡೀಕೃತ ಪತ್ರ
• ಪೋಷಕರ ಸ್ವಯಂ ದೃಡೀಕೃತ ಪತ್ರ

      ಕೆಇಎ ನಡೆಸುವ ಕೌನ್ಸೆಲಿಂಗ್‌ನ ಕೊನೆಯ ದಿನವೇ ಅರ್ಜಿ ಸಲ್ಲಿಸಲು‌ ಕೂಡಾ ಕೊನೆಯ ದಿನವಾಗಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ ನಂತರ ಇಂಡೆಮ್ನಿಟಿ ಬಾಂಡ್  (Indemnity Bond)  ಹಾಗೂ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ದಾಖಲಾತಿಗಳನ್ನು ಕೌನ್ಸಿಲಿಂಗ್ ಮುಗಿದ ಕೂಡಲೇ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) “ಮೌಲಾನಾಅಜಾದ್ ಭವನ” 2ನೇ ಮಹಡಿ, ಪಾಂಡೇಶ್ವರ, ಮಂಗಳೂರು ಇಲ್ಲಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ