ಸಮುದ್ರದ ಅಲೆಯ ಅಬ್ಬರಕ್ಕೆ ಮಗುಚಿದ ಮೀನುಗಾರಕಾ ದೋಣಿ: ಓರ್ವ ನಾಪತ್ತೆ, ಸಹಾಯಕ್ಕೆ ಬಾರದ ಕೋಸ್ಟಲ್‌ ಗಾರ್ಡ್

ಸಮುದ್ರದ ಅಲೆಯ ಅಬ್ಬರಕ್ಕೆ ಮಗುಚಿದ  ಮೀನುಗಾರಕಾ ದೋಣಿ: ಓರ್ವ ನಾಪತ್ತೆ, ಸಹಾಯಕ್ಕೆ ಬಾರದ ಕೋಸ್ಟಲ್‌ ಗಾರ್ಡ್

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಸಮುದ್ರದ ಅಬ್ಬರಕ್ಕೆ ಸಿಲುಕಿ ಮಗುಚಿದ ಘಟನೆ ಮಂಗಳೂರಿನ ತನ್ನೀರು ಬಾವಿ ಬಳಿ ನಡೆದಿದೆ. ಘಟನೆಯಲ್ಲಿ ಓರ್ವ ನಾಪತ್ತೆಯಾಗಿದ್ದು, ಣಾಲ್ವರನ್ನು ರಕ್ಷಿಸಲಾಗಿದೆ.

      ಶುಕ್ರವಾರ ಸಂಜೆ ಸಂಜೆ ಎಂದಿನಂತೆ ಬೆಂಗರೆಯಿಂದ ಎಫ್‌.ಎನ್‌. ಚಿಲ್ಡ್ರನ್ ಹೆಸರಿನ ನಾಡದೋಣಿಯಲ್ಲಿ ಐವರು ಮಿನುಗಾರರಾದ, ಶೆರೀಫ್,ಅಬ್ದುಲ್ ಅಝೀಝ್, ಸಿನಾನ್, ಇಮ್ತಿಯಾಝ್ ಮತ್ತು ಫಿರೋಝ್‌ ಎಂಬವರು ಸಮುದ್ರಕ್ಕೆ ತೆರಳಿ, ಸಮುದ್ರದಲ್ಲಿ ಬಲೆ ಬೀಸಿ ಬಂದಿದ್ದರು. ಇಂದು ಬೆಳಿಗ್ಗೆ ಬಲೆಯನ್ನು ಮೆಲೆಕ್ಕೆಳೆಯಲು 6 ಗಂಟೆಯ ಸುಮಾರಿಗೆ ಅದೇ ದೋಣಿಯಲ್ಲಿ ಮತ್ತೆ ಕಡಲಿಗೆ ತೆರಳಿದ್ದರು. ತನ್ನೀರು ಬಾವಿ ಬೀಚ್ ಬಳಿ ದಡದಿಂದ ಸುಮಾರು 300ಮೀಟರ್ ದೂರದಲ್ಲಿ ಬಲೆಯನ್ನು ಮೇಲಕ್ಕೆಳೆಯುವ ಸಂದರ್ಭದಲ್ಲಿ ಗಾಳಿಯ ರಭಸ ಮತ್ತು ಸಮುದ್ರದ ಅಲೆಗಳ ಅಬ್ಬರದಿಂದ ದೋಣಿಯಲ್ಲಿದ್ದ ಚಾಲಕ ಶೆರೀಫ್ ಎಂಬ ವ್ಯಕ್ತಿ ಮೊದಲು ಸಮುದ್ರಕ್ಕೆ ಎಸೆಯಲ್ಪಡುತ್ತಾನೆ. ನಂತರ ಸಮುದ್ರದ ಅಬ್ಬರಕ್ಕೆ ದೋಣಿ ಮಗುಚಿ, ಉಳಿದ ನಾಲ್ವರೂ ಸಮುದ್ರಕ್ಕೆ ಎಸೆಯಲ್ಪಡುತ್ತಾರೆ.

      ಸ್ಥಳೀಯ ಇಬ್ಬರು ಮಿನುಗಾರರು ಸಾಹಸದಿಂದ ಅಬ್ದುಲ್ ಅಝೀಝ್, ಇಮ್ತಿಯಾಝ್, ಸಿನಾನ್ ಹಾಗೂ ಫಿರೋಝ್ ಎಂಬವರು ಅಬ್ಬರದ ಅಲೆಗಳ ಮದ್ಯೆಯೂ ದಡ ಸೇರುತ್ತಾರೆ. ಆದರೆ ಅನುಭವಸ್ಥರಾದ ನಾಡದೋಣಿ ಚಾಲಕ ಮಿನುಗಾರ ಶರೀಫ್ ಎಂಬವರು ನೀರುಪಾಲಾಗಿದ್ದಾರೆ ಎನ್ನಲಾಗಿದೆ.

      ನಾಪತ್ತೆಯಾದ ಶರೀಫ್‌ರವರನ್ನು ಹುಡುಕಾಟ ನಡೆಸಲು ಕೋಸ್ಟ್ ಗಾರ್ಡ್ ಬೋಟ್‌ಗಳು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಊರಿನ ಇನ್ನೊಂದು ನಾಡದೋಣಿಯಲ್ಲಿ ನೌಶಾದ್ ಮತ್ತು ಬಳಗದವರು ಶೋಧ ಕಾರ್ಯಾಚರಣೆಗೆ ಇಳಿದಿದ್ದರು. ನಾಪತ್ತೆಯಾಗಿರುವ ಶರೀಫ್‌ ಮೀನಿನ ಬಲೆಯ ಮಧ್ಯೆ ಸಿಲುಕಿರಬಹುದು ಅನ್ನುವ ನಿಟ್ಟಿನಲ್ಲಿ ಬಲೆಯನ್ನು ಮೇಲೆತ್ತಲು ಪ್ರಯತ್ನ ನೆಡೆಸಲಾಗುತ್ತಿದೆ. ಆದರೆ ಸಮುದ್ರದ ಅಬ್ಬರದ ಅಲೆಗಳ ಕಾರಣದಿಂದ ಕಾರ್ಯಾಚರಣೆ ಬಕಷ್ಟವಾಗುತ್ತಿದೆ ಎನ್ನಲಾಗಿದೆ.

      ದುರಂತ ನಡೆದಿದ್ದರೂ, ಸಂತ್ರಸ್ಥರ ಸಹಾಯಕ್ಕೆ ಬಾರದ ಕೋಸ್ಟಲ್‌ ಗಾರ್ಡ್‌ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ