ಡಿಸೆಂಬರ್‌ 1ರಿಂದ ಎಸ್‌ಕೆಎಸ್‌ಎಸ್‌ಎಫ್‌ ಸದಸ್ಯತ್ವ ಅಭಿಯಾನ: ಯಶಸ್ಸುಗೊಳಿಸಲು ಸಯ್ಯಿದ್‌ ಅಮೀರ್‌ ತಂಙಳ್‌ ಕರೆ

ಡಿಸೆಂಬರ್‌ 1ರಿಂದ ಎಸ್‌ಕೆಎಸ್‌ಎಸ್‌ಎಫ್‌ ಸದಸ್ಯತ್ವ ಅಭಿಯಾನ: ಯಶಸ್ಸುಗೊಳಿಸಲು ಸಯ್ಯಿದ್‌ ಅಮೀರ್‌ ತಂಙಳ್‌ ಕರೆ

ಮಂಗಳೂರು: ರಾಜಿಯಾಗದ ಸ್ವಾಭಿಮಾನ ಎಂಬ ಧ್ಯೇಯ ವಾಕ್ಯದಡಿ ಎಸ್ಕೆಎಸ್ಎಸ್ಎಫಫ್‌ನ ದ್ವೈವಾರ್ಷಿಕ ಸದಸ್ಯತ್ವ ಅಭಿಯಾನವು ಡಿಸೆಂಬರ್ 1ರಿಂದ 15ರವರೆಗೆ ನಡೆಯಲಿದ್ದು, ಅಭಿಯಾನವನ್ನು ಯಶಸ್ಸುಗೊಳಿಸುವಂತೆ ಎಸ್ಕೆಎಸ್ಎಸ್ಎಫ್ ದ.ಕ.ಜಿಲ್ಲಾ ಅಧ್ಯಕ್ಷರಾದ ಸಯ್ಯಿದ್ ಅಮೀರ್ ತಂಙಳ್ ಕರೆ ನೀಡಿದ್ದಾರೆ.

      ಪ್ರತೀ ಎರಡು ವರ್ಷಗಳಿಗೊಮ್ಮೆ ಎಸ್ಕೆಎಸ್ಎಸ್ಎಫ್ ಸದಸ್ಯತ್ವ ಅಭಿಯಾನವು ನಡೆಯುತ್ತಿದ್ದು, ಈ ಬಾರಿಯ ಅಭಿಯಾನವು ಡಿಸೆಂಬರ್ 1ರಿಂದ ಡಿಸೆಂಬರ್ 15ರವರೆಗೆ ನಡೆಯಲಿದೆ.

      ಎಸ್‌ಕೆಎಸ್‌ಎಸ್‌ಎಫ್‌ ಎಂಬುದು ಸುನ್ನತ್‌ ಜಮಾಅತ್‌ನ ಆಶಯ ಆದರ್ಶಗಳನ್ನು ಪ್ರಚುರಪಡಿಸುವ, ಸುನ್ನತ್‌ ಜಮಾಅತ್‌ನ ಆಶಯ ಆದರ್ಶಗಳನ್ನು ಸಂರಕ್ಷಿಸುವ, “ಸಮಸ್ತ ಜಂ-ಇಯ್ಯತುಲ್‌ ಉಲಮಾ” ಎಂಬ ಮಹಾ ಪ್ರಸ್ತಾನದ ಅಧೀನ ಸಂಘಟನೆಯಾಗಿದೆ. ಇದೊಂದು  ಧಾರ್ಮಿಕ ಸಂಘಟನೆಯಾಗಿದ್ದು, ಸುನ್ನತ್ ಜಮಾಅತ್ ಮತ್ತು ಸಮಸ್ತದ ಆಶಯ, ಆದರ್ಶಗಳಿಗೆ ಬದ್ಧರಾಗಿರುವವರಿಗೆ, ಎಸ್ಕೆಎಸ್ಎಸ್ಎಫ್‌ನ ನಿಯಮಾವಳಿಗೆ ಅನುಸಾರವಾಗಿ ಷರತ್ತುಬದ್ಧ ಸದಸ್ಯತ್ವವನ್ನು ನೀಡಲಾಗುವುದು. ಆದ್ದರಿಂದ ಮಹಲ್ಲ್‌ ಕೇಂದ್ರೀಕರಿಸಿ ರೂಪೀಕರಿಸಿರುವ ಶಾಖೆಗಳ ಮುಖಾಂತರ ಸುನ್ನತ್‌ ಜಮಾಅತ್‌ನ ಕಾವಳಾಲುಗಳು ಸದಸ್ಯತ್ವವನ್ನು ಪಡೆಯುವ ಮೂಲಕ ಅಭಿಯಾನವನ್ನು ಯಶಸ್ಸುಗೊಳಿಸಬೇಕು ಎಂದು ತಂಙಳ್‌ ಕರೆ ನೀಡಿದ್ದಾರೆ.

      ಸದಸ್ಯತ್ವದ ಅವಧಿಯು ಎರಡು ವರ್ಷಗಳದ್ದಾಗಿದ್ದು, ಸದಸ್ಯತ್ವ ಪಡೆಯುವವರು ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ವಿಧಗಳಲ್ಲಿ ಅರ್ಜಿ ಫಾರಂಗಳನ್ನು ಭರ್ತಿ ಮಾಡಿ ಸ್ಥಳೀಯ ಶಾಖಾ ಕಾರ್ಯದರ್ಶಿಗೆ ಸಲ್ಲಿಸಬೇಕು.

      ಸದಸ್ಯತ್ವ ಪಡೆಯುವವರು ತಮ್ಮ ಸ್ಥಿರ ವಾಸ ಸ್ಥಳದ ವಿಳಾಸ (ಆಧಾರ್ ಕಾರ್ಡ್) ಇರುವಲ್ಲಿಯೇ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬೇಕು. ಅನ್ಯತಾ ಅರ್ಜಿಗಳು ತಿರಸ್ಕೃತಗೊಳ್ಳುವುದು. ಅರ್ಜಿ ಸಲ್ಲಿಸಲು ಸ್ಥಿರ ವಾಸ ಸ್ಥಳದ ವ್ಯಾಪ್ತಿಯಲ್ಲಿ ಬರುವ ಎಸ್ಕೆಎಸ್ಎಸ್ಎಫ್ ಶಾಖಾ ಕಾರ್ಯದರ್ಶಿಯನ್ನು ಸಂಪರ್ಕಿಸಲು ಕೋರಲಾಗಿದೆ.

      ಸದಸ್ಯತ್ವ ಅರ್ಜಿಗಳು ಮೂರು ಹಂತಗಳಲ್ಲಿ ಪರಿಶೀಲನೆಗೆ ಒಳಪಡಲಿದ್ದು, ಅಂಗೀಕೃತ ಅರ್ಜಿದಾರರಿಗೆ ಸಂಘಟನೆಯ ಅಧಿಕೃತ ಗುರುತು ಚೀಟಿಗಳನ್ನು ನೀಡಲಾಗುವುದು. ಇದು ಷರತ್ತು ಬದ್ಧವಾಗಿದ್ದು, ಸಂಘಟನೆ ನಿಯಮಗಳಿಗೆ ವಿರುದ್ಧವಾಗಿ, ಸಂಘಟನೆಯ ವರ್ಚಸ್ಸಿಗೆ ಧಕ್ಕೆ ಬರುವಂತಹ ಚಟುವಟಿಕೆ ನಡೆಸುವವರ ಸದ್ಸ್ಯತ್ವವನ್ನು ಯಾವುದೇ ಕ್ಷಣದಲ್ಲಿ ಹಿಂಪಡೆಯಬಹುದಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಳಿಸಿದ್ದಾರೆ.

      ಡಿಸೆಂಬರ್‌ 2ರಂದು ಬೆಳಿಗ್ಗೆ ಮಿತ್ತಬೈಲು ಜಬ್ಬಾರ್‌ ಉಸ್ತಾದ್‌ರವರ ಖಬರ್‌ ಝಿಯಾರತ್‌ನೊಂದಿಗೆ ಜಿಲ್ಲಾ ಮಟ್ಟದಲ್ಲಿ ಸದಸ್ಯತ್ವ ಅಭಿಯಾನವನ್ನು ಅಧಿಕೃತವಾಗಿ ಉದ್ಘಾಟಿಸಲಾಗುವುದು. ಅಂದು ಬೆಳಿಗ್ಗೆ 9 ಗಂಟೆಗೆ ಎಸ್‌ಕೆಎಸ್‌ಎಸ್‌ಎಫ್‌ ಜಿಲ್ಲಾಧ್ಯಕ್ಷ ಸಯ್ಯಿದ್‌ ಅಮೀರ್‌ ತಂಙಳ್‌ ಅವರು ಚಾಪಳ್ಳ‌ ಮಖಾಶಿಫುಲ್‌ ಖುಲೂಬ್ ದರ್ಸ್ ವಿದ್ಯಾರ್ಥಿ ಹಾಫಿಝ್‌ ಸಯ್ಯಿದ್‌ ಹಸನ್‌ ಅಲ್-ಹಾದಿ ತಂಙಳ್‌ರವರಿಂದ ಸದಸ್ಯತ್ವ ಅರ್ಜಿ ಫಾರಂ ಸ್ವೀಕರಿಸುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ.

      ಸದಸ್ಯತ್ವ ಅಭಿಯಾನದ ಯಶಸ್ವಿಗೆ ಎಸ್‌ಕೆಎಸ್‌ಎಸ್‌ಎಫ್‌ ಓರ್ಗನೆಟ್‌ ಸಮಿತಿಯು ಎಲ್ಲಾ ಪೂರ್ವ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಅಭಿಯಾನದುದ್ದಕ್ಕೂ ಸಾರ್ವಜನಿಕರಿಗೆ ಸಹಾಯ ನೀಡಲು ಸಜ್ಜಾಗಿದೆ. ಸದಸ್ಯತ್ವ ಅಭಿಯಾನದ ಯಾವುದೇ ಸಮಸ್ಯೆಗಳಿಗೆ ಓರ್ಗನೆಟ್‌ ದ.ಕ.ಜಿಲ್ಲಾ ಚೇರ್ಮನ್‌ ತಾಜುದ್ದೀನ್‌ ರಹ್ಮಾನಿ (94802 48423), ಕನ್ವೀನರ್‌ ಸಫ್ವಾನ್‌ ಬಂಟ್ವಾಳ (98451 42650) ಹಾಗೂ ಉಸ್ತುವಾರಿ ರಿಯಾಜ್‌ ರಹ್ಮಾನಿ (95354 53580) ಇವರಗಲನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್‌ ಯಮಾನಿ ತಿಳಿಸಿದ್ದಾರೆ.

ನಂದನ ಟೈಮ್ಸ್ ನಿಮಗೆ ಆಪ್ತವೇ? ಇದರ ಸುದ್ಧಿಗಳು ಮತ್ತು ವಿಚಾರಗಳು ನಿಮಗೆ ನಿರಂತರವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ